×
Ad

ಕಲಬುರಗಿ | ಬಿ.ಆರ್.ಪಾಟೀಲ್ ಅವರು ಸರಕಾರವನ್ನು ಅಸ್ಥಿರವನ್ನಾಗಿಸಲು ಒಳಸಂಚು ರೂಪಿಸಿದ್ದಾರೆ : ಹರ್ಷಾನಂದ ಗುತ್ತೇದಾರ್

Update: 2025-06-24 23:28 IST

ಕಲಬುರಗಿ: ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ದೊಡ್ಡ ಡೀಲ್ ಕುದರಿಸುವ ಸಲುವಾಗಿ ವಸತಿ ಹಗರಣವನ್ನು ಬಯಲಿಗೆ ತಂದಿದ್ದಾರೆ ಎಂದು ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್‌ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆಳಂದ ತಾಲೂಕಿನಲ್ಲಿ ಕಳೆದ 2024ರ ಅಕ್ಟೋಬ‌ರ್- ನವೆಂಬರ್‌ ನಲ್ಲೇ 950 ಮನೆಗಳು ಮಂಜೂರಾಗಿವೆ. ಇಷ್ಟು ದಿನ ಬಿಟ್ಟು ಈಗ ಶಾಸಕ ಬಿ.ಆರ್. ಪಾಟೀಲ್ ಅವರು ವಸತಿ ನಿಗಮದಲ್ಲಿ ದುಡ್ಡು ಕೊಟ್ಟು ಮನೆ ಮಂಜೂರು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಮಗೆ ಮಂತ್ರಿ ಸ್ಥಾನ ನೀಡುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಸರಕಾರವನ್ನು ಅಸ್ಥಿರವನ್ನಾಗಿ ಮಾಡಲು ಒಳಸಂಚು ರೂಪಿಸಿದ್ದಾರೆ ಎಂದರು.

ಶಿರಪುರ ಮಾದರಿಯಲ್ಲಿ ಅಂತರ್ಜಾಲ ಮಟ್ಟ ಹೆಚ್ಚಿಸುವ ಕಾಮಗಾರಿಗಳನ್ನು ಸಣ್ಣ ನೀರಾವರಿ ಇಲಾಖೆಯಿಂದ 20 ಕೋಟಿ ವೆಚ್ಚದಲ್ಲಿ ನಿರ್ಮಿಸುವುದಾಗಿ ರೂಪರೇಷೆ ಹಾಕಿಕೊಂಡಿದ್ದಾರೆ. ಆದರೆ ಈ ಕಾಮಗಾರಿಗಳು ಕೇವಲ 2 ಕೋಟಿಯಲ್ಲೆ ಮುಗಿದು ಹೋಗುವಂಥ ಯೋಜನೆಗಳಾಗಿವೆ. 2 ಕೋಟಿಯಷ್ಟು ಕೆಲಸ ಮಾಡುವುದು ಉಳಿದ ದುಡ್ಡನ್ನು ಕೊಳ್ಳೆ ಹೊಡೆಯುವ ತಂತ್ರ ಶಾಸಕರಿಂದ ನಡೆಯುತ್ತಿದೆ ಎಂದು ಹರ್ಷಾನಂದ ಗುತ್ತೇದಾರ್ ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕಂದಗೂಳೆ, ಶಶಿ ಕುಲಕರ್ಣಿ, ಬಾಬುರಾವ್ ಸರಡಗಿ, ಸಮೀರ್ ಅನ್ಸಾರಿ, ಆನಂದ್ ಪಾಟೀಲ್, ಸಂತೋಷ್ ಹಾದಿಮನಿ, ಗೊರಕನಾಥ್, ಶರಣಗೌಡ ಪಾಟೀಲ ದೇವಂತಗಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News