Kalaburagi | ಶರಣಬಸವ ವಿವಿಯ ಬಿಬಿಎ ವಿಭಾಗದ 28 ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ ನೇಮಕಾತಿ
ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ಮಹಿಳೆಯರಿಗಾಗಿ ವಿಶೇಷವಾಗಿ ನಡೆಸಲಾಗುತ್ತಿರುವ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (ಬಿಬಿಎ) ವಿಭಾಗದ 28 ವಿದ್ಯಾರ್ಥಿನಿಯರು ವಿವಿಧ ಸಾಫ್ಟ್‌ವೇರ್ ಕಂಪನಿಗಳು ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಆಕರ್ಷಕ ವೇತನದೊಂದಿಗೆ ಉದ್ಯೋಗ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿಯರಾದ ಶಿವಾನಿ ಪಾಟೀಲ, ಸುಷ್ಮಾ ಹಾಗೂ ಫರಿಯಾ ಅಂಜುಮ್ ಅವರು ಜಾಗತಿಕ ಮಟ್ಟದ ಆನ್‌ಲೈನ್ ವೃತ್ತಿಪರ ತರಬೇತಿ ಸಂಸ್ಥೆಯಾದ ಇಂಟೆಲಿಪಾಟ್ ಸಾಫ್ಟ್‌ವೇರ್ ಸೊಲ್ಯೂಷನ್ಸ್‌ನಲ್ಲಿ ವಾರ್ಷಿಕ 8 ಲಕ್ಷ ರೂ. ವೇತನದೊಂದಿಗೆ ಉದ್ಯೋಗ ಪಡೆದಿದ್ದಾರೆ.
ಇನ್ನೂ ಐವರು ವಿದ್ಯಾರ್ಥಿನಿಯರು ವಿವಿಧ ಕಂಪನಿಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ವಾರ್ಷಿಕ 3 ಲಕ್ಷ ರೂ. ವೇತನದೊಂದಿಗೆ ನೇಮಕಗೊಂಡಿದ್ದಾರೆ. ಆರು ವಿದ್ಯಾರ್ಥಿನಿಯರು ವಾರ್ಷಿಕ 2.5 ಲಕ್ಷ ರೂ. ವೇತನದೊಂದಿಗೆ ಹಾಗೂ ಹತ್ತು ವಿದ್ಯಾರ್ಥಿನಿಯರು ವಾರ್ಷಿಕ 2 ಲಕ್ಷ ರೂ. ವೇತನದೊಂದಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ.
ಕ್ಯಾಂಪಸ್ ನೇಮಕಾತಿಯಲ್ಲಿ ಯಶಸ್ಸು ಸಾಧಿಸಿದ ವಿದ್ಯಾರ್ಥಿನಿಯರಲ್ಲಿ ಶಿವಾನಿ ಪಾಟೀಲ, ಸುಷ್ಮಾ, ಫರಿಯಾ ಅಂಜುಮ್, ಶೀತಲ್, ಲಿಪ್ಸಿತಾ ದಾಸ್, ಶಾಂಭವಿ, ನಾಗರತ್ನ, ಸೋನಿಕಾ, ಸೃಷ್ಟಿ ಎಂ. ಪೊದ್ದಾರ್, ಅಂಕಿತಾ, ಲಕ್ಷ್ಮೀ ನಾಯಕ್ ಬುಪುರ, ಸಾಕ್ಷತಾ, ಅರ್ಪಿತಾ ಸಿ., ಶ್ರೇಯಾ ವೈ., ಸೌಜನ್ಯ ಗುತ್ತೇದಾರ, ಪ್ರಿಯಾಂಕಾ, ಪ್ರಭಾ, ಭಾಗ್ಯಶ್ರೀ ರಾಮಲಿಂಗ, ಸ್ನೇಹಾ ಚವಾಣ್, ಸಂಜನಾ, ನಂದಿನಿ ಶ್ರೀಮನ್, ತೇಜಸ್ವಿನಿ ಎಂ., ಗೌರಿ ಎಂ.ಎಚ್., ಭಾಗ್ಯಶ್ರೀ ನಿಗೂಡಿ, ಭುವನೇಶ್ವರಿ ಎಚ್., ಪ್ರಗತಿ, ಭವಾನಿ ಹಾಗೂ ಪಿ. ಪಲ್ಲವಿ ಸೇರಿದ್ದಾರೆ.
ಈ ಸಾಧನೆಗಾಗಿ ವಿದ್ಯಾರ್ಥಿನಿಯರು, ಬೋಧಕ ಸಿಬ್ಬಂದಿ ಹಾಗೂ ಬಿಬಿಎ ವಿಭಾಗದ ಚೇರ್‌ಪರ್ಸನ್ ಪ್ರೊ. ಶಿಲ್ಪಾ ಕಂದಗೂಳ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಡಾ. ದಾಕ್ಷಾಯಿಣಿ ಅವ್ವಾಜಿ ವಿದ್ಯಾರ್ಥಿನಿಯರ ಸಾಧನೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವ ಡಾ. ಲಕ್ಷ್ಮೀ ಪಾಟೀಲ ಮಕಾ, ಕುಲಸಚಿವ (ಮೌಲ್ಯಮಾಪನ) ಡಾ. ಎಸ್.ಎಚ್. ಹೊನ್ನಳ್ಳಿ ಹಾಗೂ ಹಣಕಾಸು ಅಧಿಕಾರಿ ಡಾ. ಕಿರಣ್ ಮಕಾ ಸೇರಿದಂತೆ ಅನೇಕ ಗಣ್ಯರು ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.