Kalaburagi | ತೋಟಗಾರಿಕೆ ಇಲಾಖೆ: ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ
ಕಲಬುರಗಿ: ತೋಟಗಾರಿಕೆ ಇಲಾಖೆಯ ವತಿಯಿಂದ 2026-27ನೇ ಸಾಲಿಗೆ ಇಲಾಖೆಯ ಕೆಳಕಂಡ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ತೋಟಗಾರಿಕೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ (ಪಿ.ಎಮ್.ಕೆ.ಎಸ್.ವೈ), ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್‍ಹೆಚ್‍ಎಮ್), ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿ ಹಣ್ಣು, ಹೂವು ಮತ್ತು ತರಕಾರಿ ಬೆಳೆಗಳಿಗೆ ಹೊಸ ಪ್ರದೇಶ ವಿಸ್ತರಣೆ, ನೀರು ಸಂಗ್ರಹಣ ಘಟಕದಡಿ ವೈಯಕ್ತಿಕ ಕೃಷಿಹೊಂಡ, ಕೋಯ್ಲೋತ್ತರ ನಿರ್ವಹಣೆ, ಫಾರ್ಮ್‍ಗೇಟ್ (Farmgate), , ಪ್ಯಾಕ್‍ಹೌಸ್ (Pack House), ಈರುಳ್ಳಿ ಶೇಖರಣಾ ಘಟಕ, ಸಂರಕ್ಷೀತ ಬೇಸಾಯದಡಿ ಪಾಲಿಮನೆ ಹಾಗೂ ನೆರಳುಪರದೆ ಘಟಕ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್.ಕೆ.ವಿ.ವೈ.) ಯಡಿ ಸೋಲಾರ ಪಂಪ್‍ಸೆಟ್ (Solar Pumpset), ಈರುಳ್ಳಿ ಶೇಖರಣಾ ಘಟಕ ಮತ್ತು ತಾಳೆ ಬೆಳೆ (Oil Palm) ಯೋಜನೆಯಡಿ ತಾಳೆಬೆಳೆ ಹೊಸ ಪ್ರದೇಶ ವಿಸ್ತೀರ್ಣ, ನೀರು ಸಂಗ್ರಹಣ ಘಟಕ ಹಾಗೂ ಇನ್ನಿತರೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.
ರೈತರು ಅರ್ಜಿ ಸಲ್ಲಿಕೆಗೆ 2026ರ ಜೂ.30ರಂದು ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ಸಂಬಂಧಪಟ್ಟ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಮೊಬೈಲ್ ಸಂಖ್ಯೆಗಳಾದ ಅಫಜಲಪುರ-7760969088, ಆಳಂದ-8095143035, ಚಿಂಚೋಳಿ-9916874287, ಚಿತ್ತಾಪೂರ-9611250501, ಕಲಬುರಗಿ-9900108196, ಜೇವರ್ಗಿ-9986516251 ಹಾಗೂ ಸೇಡಂ-9164570011 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.