ಕಲಬುರಗಿ | ಮೇ 24ರಂದು ಕ್ಯಾನ್ಸರ್ ಅರಿವು ಕಾರ್ಯಕ್ರಮ
ಕಲಬುರಗಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಮಹಿಳಾ ನೌಕರರ ಸಂಘ, ನಾಲ್ಕುಚಕ್ರ ತಂಡ, ಕಿದ್ವಾಯಿ ಆಸ್ಪತ್ರೆ, ಮಣ್ಣೂರ ಆಸ್ಪತ್ರೆ, ಜಿಲ್ಲಾ ಸ್ತ್ರೀರೋಗ ತಜ್ಞರ ಸಂಘ ಇವುಗಳ ಸಹಯೋಗದೊಂದಿಗೆ ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಇವರ ಅಧ್ಯಕ್ಷತೆಯಲ್ಲಿ ಮೇ 24 ರಂದು ಬೆಳಿಗ್ಗೆ 9 ರಿಂದ ಸಂಜೆ 4.30 ಗಂಟೆಯವರೆಗೆ ಕಲಬುರಗಿ ನಗರದ ಅಪ್ಪಾ ಪಬ್ಲಿಕ್ ಶಾಲೆಯ ಸಭಾಂಗಣದಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕ್ಯಾಂಪ್‍ನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲಾಗುವುದು. ಸರ್ವಿಕಲ್ ಕ್ಯಾನ್ಸರ್ ಕಂಡು ಹಿಡಿಯುವ pap smear ಉಚಿತವಾಗಿ ಮಾಡಲಾಗುತ್ತದೆ. ಸರ್ವಿಕಲ್ ಕ್ಯಾನ್ಸರ್ ಬರದೇ ಹಾಗೆ ತಡೆಯುವ ಹೆಚ್.ಪಿ.ವಿ. (HPV) ಲಸಿಕೆಯನ್ನು 1,500 ರೂ. ನಲ್ಲಿ ನೀಡಲಾಗುತ್ತದೆ. ಕ್ಷಯರೋಗ ನಿರ್ಮೂಲನೆಗೆ ಬಿ.ಸಿ.ಜಿ.(BCG) ಲಸಿಕೆ ಉಚಿತವಾಗಿ ನೀಡಲಾಗುತ್ತದೆ. ಸಾಂಕ್ರಾಮಿಕ ರೋಗಗಳಾದ, ಸಕ್ಕರೆ ಕಾಯಿಲೆ, ಉಚಿತವಾಗಿ ರಕ್ತದೊತ್ತಡ ತಪಾಸಣೆ ಮಾಡಲಾಗುತ್ತದೆ. ಉಚಿತ ಕಣ್ಣಿನ ತಪಾಸಣೆ ಮತ್ತು ಉಚಿತ ಕನ್ನಡಕ ನೀಡಲಾಗುವುದು. ಸ್ತನ ಕ್ಯಾನ್ಸರ ತಪಾಸಣೆ ಮಾಡಲಾಗುವುದು. mamogram ಪರೀಕ್ಷೆ ಬೇಕಾದಲ್ಲಿ Kidwai ಆಸ್ಪತ್ರೆಯಲ್ಲಿ ಉಚಿತವಾಗಿ ಮಾಡಲಾಗುವುದು. ಉಚಿತವಾಗಿ ದಂತ ಕ್ಯಾನ್ಸರ್ ತಪಾಸಣೆ ಮಾಡಲಾಗುತ್ತದೆ.
ಈ ಶಿಬಿರದಲ್ಲಿ ಎಲ್ಲಾ ನುರಿತ ವ್ಶೆದ್ಯರು ಹಾಗೂ ಸಿಬ್ಬಂದಿ ವರ್ಗದವರು ತಪಾಸಣೆ ಮಾಡಲಿದ್ದು, ಸಾರ್ವಜನಿಕರು ಈ ಶಿಬಿರದ ಉಪಯೋಗವನ್ನು ಇದರ ಸದುಪಯೋಗ ಪಡೆದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಹೆಚ್ಚಿನ ಮಾಹಿತಿಗಾಗಿ 9972696950, 9741299995, 7411176831, 9845695023, 9886622264 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.