ಕಲಬುರಗಿ | ಮೃತ ರವಿ ಕುಟುಂಬಕ್ಕೆ ಚೆಕ್ ವಿತರಣೆ
Update: 2025-02-17 20:11 IST
ಕಲಬುರಗಿ : ಚಿಂಚೋಳಿ ತಾಲೂಕಿನ ಸಾಲೆ ಬೀರನಹಳ್ಳಿ ಗ್ರಾಮದ ಭೋವಿ ಸಮಾಜದ ಮೃತಪಟ್ಟ ಯುವಕ ರವಿ ಭೋವಿ ಅವರ ಮನೆಗೆ ಸಮಾಜ ಕಲ್ಯಾಣ ಇಲಾಖೆಯ ಅಪರ ಜಂಟಿ ನಿರ್ದೇಶಕ ಅಲ್ಲಾಭಕ್ಷ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಸರ್ಕಾರದ ವತಿಯಿಂದ ರೂ. 4,12,500 ರೂ. ಚೆಕ್ ವಿತರಿಸಲಾಯಿತು. ಸರಕಾರದಿಂದ ಕುಟುಂಬ್ಥರಿಗೆ ಯಾವುದಾದರು ಒಂದು ಸರಕಾರಿ ಕೆಲಸ ನೀಡಬೇಕು ಮತ್ತು 50.ಲಕ್ಷ ರೂ. ಪರಿಹಾರ ನೀಡಬೇಕೆಂದು ಕ್ರಾಂತಿವೀರ ಬೆಳವಡಿ ವಡ್ಡರ ಯಲ್ಲಣ್ಣ ಸೇನೆ ಸಂಸ್ಥಾಪಕ ಅಧ್ಯಕ್ಷ ಜಿ ಶಿವಶಂಕರ್ ಅವರು ಸರಕಾರಕ್ಕೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಚಿಂಚೋಳಿ ಸಹಾಯಕ ನಿರ್ದೇಶಕ ಪ್ರಭುಲಿಂಗ, ಕೃಷ್ಣ ಕುಶಲ್ಕರ್, ನಾಗೇಶ್ ಗೊಣ್ಣೂರ್, ಭೋವಿ ಸಮಾಜದ ಚಿಂಚೋಳಿ ತಾಲೂಕ ಅಧ್ಯಕ್ಷ ಜಗದೇವ್ ರಾಜಾಪುರ, ಹನುಮಂತ್ ಗಾರಂಪಲ್ಲಿ, ಗಂಗಾಧರ್ ಇನ್ನಿತರು ಆನೊಂದ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.