ಕಲಬುರಗಿ | ಟಯರ್ ಬ್ಲಾಸ್ಟ್ ಆಗಿ ಕ್ರಷರ್ ಪಲ್ಟಿ: 10 ಮಂದಿಗೆ ಗಾಯ
Update: 2025-01-15 19:45 IST
ಕಲಬುರಗಿ : ಟಯರ್ ಬ್ಲಾಸ್ಟ್ ಆಗಿ ಕ್ರಷರ್ ವಾಹನ ಪಲ್ಟಿಯಾಗಿರುವ ಘಟನೆ ಕಲಬುರಗಿ ಹೊರವಲಯದ ಸರಡಗಿ ಕ್ರಾಸ್ ಸಮೀಪ ನಡೆದಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಕಲಬುರಗಿ ನಗರದಿಂದ ಜೇವರ್ಗಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಡಗಿ ಕ್ರಾಸ್ ಬಳಿಯಲ್ಲಿ 14 ಜನರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕ್ರಷರ್ ವಾಹನ ಪಲ್ಟಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, 10ಕ್ಕೂ ಹೆಚ್ಚು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಲ್ಟಿಯಾದ ಕ್ರಷರ್ ನೋಡಿದ ಸಾರ್ವಜನಿಕರು ತಕ್ಷಣವೇ ಆಂಬ್ಯುಲೆನ್ಸ್ ಅನ್ನು ಕರೆಸಿ ಗಾಯಗೊಂಡವರನ್ನು ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಜಿಮ್ಸ್ ಆಸ್ಪತ್ರೆಗೆ ಟ್ರಾಫಿಕ್-1 ಪೊಲೀಸರು ಎಎಸ್ಐ ಸಿಕಂದರ್ ಖಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಚಾರಿ-1 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.