×
Ad

ಕಲಬುರಗಿ | ಬಜೆಟ್ ನಲ್ಲಿ ತೊಗರಿ ಬೆಳೆ ನಷ್ಟ ಪರಿಹಾರಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

Update: 2025-02-22 16:56 IST

ಕಲಬುರಗಿ : ಬೆಳೆ ನಷ್ಟದಿಂದಾಗಿ ರಾಜ್ಯದಲ್ಲಿ ಸಾಲದ ಭಾದೆಯಿಂದ ರೈತರ ಸರಣಿ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅನ್ನದಾತರ ಅನೂಕಲಕರ ಮತ್ತು ರೈತರ ಆತ್ಮಹತ್ಯೆಯ ತಡೆಗಟ್ಟಲು ರಾಜ್ಯ ಸರಕಾರ ತನ್ನ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ KPRS ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.

ಮಾ.3ರ  2025 -26 ನೇ ಸಾಲಿನ ಬಜೆಟನ್ನು ರಾಜ್ಯ ಸರಕಾರ ಮಂಡಿಸಲಿದ್ದು, ಕಲಬುರಗಿ ಜಿಲ್ಲೆಯ ತೊಗರಿ ಬೋರ್ಡ್ ಗೆ ಅನುದಾನ ನೀಡಿ ಬೋರ್ಡ್ ಬಲಪಡಿಸಬೇಕು. ತೊಗರಿ ಬೆಳೆ ಹಾನಿಯಾಗಿರುವ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ಘೋಷಣೆ, ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಕಲ್ಯಾಣ ಕರ್ನಾಟಕ ಭಾಗದ ರೈತರ ಹಿತ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.

ಅಲ್ಲದೇ ಡಿಸಿಸಿ ಬ್ಯಾಂಕ್ ಸೇರಿ ರೈತರ ಸಾಲ ಮನ್ನಾ ಮಾಡಿ, ಬಿಜ ರಸಗೊಬ್ಬರ ಕೀಟನಾಶಕಗಳಿಗೆ ಸಹಾಯಧನ ಹೆಚ್ಚಿಸಿಬೇಕು ಮತ್ತು ಕಲಬುರಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News