ಕಲಬುರಗಿ | ರಸ್ತೆ ಅಗಲೀಕರಣ ಪೂರ್ಣಗೊಳಿಸಲು ಆಗ್ರಹ
ಕಲಬುರಗಿ: ನಗರದ ಸಾಯಿಮಂದಿರ ರಸ್ತೆಯಿಂದ ಗಂಗಾ ಅರ್ಪಾಟಮೆಂಟ್ ರವರೆಗಿನ ರಸ್ತೆ ಅಗಲೀಕರಣ ಸ್ಥಗಿತಗೊಳಿಸಲಾಗಿದ್ದು, ಇದನ್ನು ಪುನಃ ಪ್ರಾರಂಭಿಸುವಂತೆ ಆಗ್ರಹಿಸಿ ಜೈಕನ್ನಡ ಸೇನೆಯ ವತಿಯಿಂದ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ರಸ್ತೆ ಅಗಲೀಕರಣ ಕಾಮಗಾರಿ ಕೈಗೆತ್ತಿಕೊಂಡು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು, ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇರುವುದು ಖಂಡನೀಯ, ಇಲ್ಲಿನ ರಸ್ತೆ ಬದಿಯಲ್ಲಿ ಬರುವ ಅನಧಿಕೃತ ಅಪಾರ್ಟಮೆಂಟ್, ಮನೆಗಳನ್ನು ತೆರವುಗೊಳಿಸದೆ ಕಾಮಗಾರಿಯು ಸ್ಥಗಿತಗೊಳಿಸಿರುತ್ತಾರೆ ಎಂದು ಮನವಿಯಲ್ಲಿ ಆರೋಪಿದ್ದ ಅವರು ಈ ಕಾಮಗಾರಿಯನ್ನು ವೀಕ್ಷಿಸಲು ಈ ಹಿಂದೆ ಶಾಸಕರಾದ ಅಲ್ಲಮಪ್ರಭು ಪಾಟೀಲ, ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳ ಪರಿಶೀಲನೆ ಮಾಡಿ ಎಲ್ಲಾ ಅರ್ಪಾಟಮೆಂಟ್ ಹಾಗೂ ಮನೆಗಳನ್ನು ಡೆಮಾಲಿಶ ಮಾಡಿ 60 ಫೀಟ್ ರಸ್ತೆ ನಿರ್ಮಿಸಲು ಸೂಚಿಸಿರುತ್ತಾರೆ.
ಆದರೆ ಇಲ್ಲಿಯವರೆಗೆ ಲ್ಯಾಂಡ್ ಆರ್ಮಿ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ಈ ಕಾಮಗಾರಿಗೆ ಮತ್ತು ತಮ್ಮ ಇಲಾಖೆಗೆ ಸಂಬಂಧವಿಲ್ಲದಂತೆ ಮೌನವಹಿಸಿದ ಕಾರಣ ಕಾಮಗಾರಿಯನ್ನು ಸ್ಥಗಿ-ತಗೊಳಿಸಿ ಕಳಪೆ ಕಾಮಗಾರಿಯನ್ನು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್. ಭಾಸಗಿ, ಮುಖಂಡರಾದ ಮಲ್ಲು ಆಲಗೂಡ, ನವೀನ ಧುಮ್ಮನಸೂರ, ವಿಠಲ ವಾಲಿಕಾರ, ಅಭಿ ಗೌಡ, ಹುಸೇನ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.