×
Ad

Kalaburagi | ಅಂಚೆ ಜೀವ ವಿಮೆ ಏಜೆಂಟರ ನೇಮಕಕ್ಕೆ ಮೇ 28ರಂದು ನೇರ ಸಂದರ್ಶನ

Update: 2026-05-20 17:14 IST

ಕಲಬುರಗಿ: ಕಲಬುರಗಿ ವಿಭಾಗದ ಅಂಚೆ ಕಚೇರಿಯಿಂದ ಅಂಚೆ ಜೀವ ವಿಮೆ (ಪಿಎಲ್‌ಐ) ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ (ಆರ್‌ಪಿಎಲ್‌ಐ) ಉತ್ಪನ್ನಗಳ ಮಾರಾಟಕ್ಕಾಗಿ ನೇರ ಪ್ರತಿನಿಧಿಗಳ (ಏಜೆಂಟರ) ನಿಯುಕ್ತಿಗೆ ಮೇ 28, 2026 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ಆಯೋಜಿಸಲಾಗಿದೆ ಎಂದು ಕಲಬುರಗಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜವಳಿ ಕಾಂಪ್ಲೆಕ್ಸ್ ಎದುರಿನ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದ್ದು, ಜೇವರ್ಗಿ, ಕಲಬುರಗಿ, ಕಮಲಾಪೂರ, ಆಳಂದ, ಕಾಳಗಿ, ಅಫಜಲಪುರ ಹಾಗೂ ಚಿಂಚೋಳಿ ತಾಲೂಕಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಅಭ್ಯರ್ಥಿಗಳ ವಯೋಮಿತಿ 18 ರಿಂದ 50 ವರ್ಷದೊಳಗಿರಬೇಕು. ಕನಿಷ್ಠ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಕಲಬುರಗಿ ಜಿಲ್ಲೆಯ ವಾಸಸ್ಥಳ ಪ್ರಮಾಣಪತ್ರ ಹೊಂದಿರಬೇಕು. ಬೇರೆ ಯಾವುದೇ ವಿಮಾ ಸಂಸ್ಥೆ, ಕಂಪನಿ ಅಥವಾ ಸಂಘಗಳಲ್ಲಿ ನೇರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿರಬಾರದು ಎಂದು ತಿಳಿಸಲಾಗಿದೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಅಥವಾ ಭತ್ಯೆ ಇರುವುದಿಲ್ಲ. ಜೀವ ವಿಮೆಗಳ ವ್ಯವಹಾರ ಆಧರಿಸಿ ಕಮಿಷನ್ ನೀಡಲಾಗುತ್ತದೆ.

ಅಭ್ಯರ್ಥಿಗಳು ಜನ್ಮ ದಿನಾಂಕ ಪ್ರಮಾಣಪತ್ರ, ಶೈಕ್ಷಣಿಕ ಪ್ರಮಾಣಪತ್ರಗಳ ನಕಲು ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದವರು ₹5,000 ಮೌಲ್ಯದ ಎನ್‌ಎಸ್‌ಸಿ ಅಥವಾ ಕೆವಿಪಿ ಖರೀದಿಸಿ ಅಂಚೆ ಅಧೀಕ್ಷಕರು, ಕಲಬುರಗಿ ವಿಭಾಗ ಇವರ ಹೆಸರಿನಲ್ಲಿ ಪ್ಲೆಡ್ಜ್ ಮಾಡಬೇಕಾಗಿದೆ.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಅಥವಾ ದೂರವಾಣಿ ಸಂಖ್ಯೆ 08472-263800 ಹಾಗೂ ಮೊಬೈಲ್ ಸಂಖ್ಯೆ 7353351111 ಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News