×
Ad

ಕಲಬುರಗಿ | ಮೆಕ್ಯಾನಿಕ್ ವೃತ್ತಿಯ ಉದ್ಯೋಗ ಪ್ರಮಾಣ ಪತ್ರ ವಿತರಣೆ

Update: 2025-03-09 20:44 IST

ಕಲಬುರಗಿ : ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲಕರ ಮತ್ತು ತಂತ್ರಜ್ಞಾನ ಸಂಘ ಬೆಂಗಳೂರು ಮತ್ತು ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಮೆಕ್ಯಾನಿಕ್ ವೃತ್ತಿಯಲ್ಲಿರುವ ಕಾರ್ಮಿಕರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಮತ್ತು ಇಫ್ತಾರ್ ಕೂಟ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಇಲಾಖೆಯ ಅಧಿಕಾರಿ ರವಿಕುಮಾರ್, ಮೆಕ್ಯಾನಿಕ್ ಗಳಿಗೆ ಆಕ್ಸಿಡೆಂಟಲ್ ಇನ್ಸೂರೆನ್ಸ್, ಹೆಲ್ತ್ ಇನ್ಸೂರೆನ್ಸ್, ಮಕ್ಕಳಿಗಾಗಿ ವಿದ್ಯಾಭಾಸದ ಖರ್ಚು ವೆಚ್ಚ ಸರ್ಕಾರದಿಂದ ಸಿಗುವ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದರು.

ಕಾನೂನು ಸಲಹೆಗಾರರಾದ ಚಂದ್ರಕಾಂತ್ ಆರ್ ಕಾಳಗಿ ಮಾತನಾಡಿ, ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಮೆಕ್ಯಾನಿಕ್ ಬಾಂಧವರಿಗೆ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಕೇಳಿಕೊಂಡ ಅವರು ಕಾನೂನು ಸಲಹೆ ಉಚಿತವಾಗಿ ಕೊಡುವ ಬಗ್ಗೆ ಭರವಸೆ ನೀಡಿದರು.

ಅಭಿಷೇಕ್ ಅಲ್ಲಂಪ್ರಭು ಪಾಟೀಲ್ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡುವುದಾಗಿ ತಿಳಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷರಾದ ಕಮಲಾಕರ್ ಧನಿ ಎಲ್ಲರೂ ಒಗ್ಗೂಡಿಸಿ ಎರಡು ವರ್ಷದಲ್ಲಿ ತಾವು ಮಾಡಿದ ಕಾರ್ಯದ ಬಗ್ಗೆ ವಿವರಣಾತ್ಮಕವಾಗಿ ಮಾತನಾಡಿ, ಇವತ್ತು ಕರ್ನಾಟಕದ್ಯಂತ ರಾಜ್ಯಾಧ್ಯಕ್ಷ ಕೆ ಎಸ್ ಪ್ರಸನಕುಮಾರ್ ಗೌಡ, ಉಪಾಧ್ಯಕ್ಷರಾದ ಏನ್ ಜಗದೀಶ್ ಸರ್ ಕಾರ್ಯದರ್ಶಿಗಳಾದ ಭಾಸ್ಕರ್ ಸಲಹೆಯೊಂದಿಗೆ ಜಿಲ್ಲೆಯಲ್ಲಿ ಸಂಘದ ಎಲ್ಲಾ ತಾಲೂಕಿನ ಮತ್ತು ಮಹಾನಗರದ ಶರಣು ಸುನಿಲ್ ಫಯಾಜ್ ಶಿವಾನಂದ್ ಜಿಲ್ಲಾದ್ಯಂತ ಸಂಘಟನೆಯನ್ನು ಗಟ್ಟಿಯಾಗಿ ಸದೃಢವಾಗಿ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಮುಖಂಡರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅನಿಕುಮಾರ್ ಯಾದಲಾಪುರ್, ಫಯಾಜ್ ಬೇಗ್, ಶಿವಾನಂದ ಧ್ಯಾಮ್, ಶರಣು ದೇವಾಂಗೊವ್, ನಾಗರಾಜ ಕಾಮನಳಿ, ಮಲ್ಲು ಬುರ್ಡೆ, ನಾಗರಾಜ್ ಪಾಟೀಲ್, ಶರಣು ಹುಲಿ, ಮೈಬುಬ್ ಡಾನಗೆ, ಸಿದ್ದು ಬೈ, ರಿಜ್ವಾನ್, ಅಂಬರೀಷ್, ಅರ್ಫಿ ಶೇಕ್, ಗಂಗು, ಬೈಕ್ ಝುನ್ ನಾಗು, ಯಲ್ಲಾಲಿಂಗ, ಶ್ರೀಶೈಲ, ರಾಜಶೇಖರ್, ದಯಾನಂದ್, ಮೌಲಾಲಿ, ಎಂ.ಜಿ.ಯೂಸುಫ್, ಇರ್ಫಾನ್, ಮಹಮ್ಮದ್ ಅಲಿ, ಗಂಜ್ ಮೈಹಿಬುಬ್, ಮಹದೇವ್, ಕೈಲಾಸ, ಸ್ವಾಮಿ, ಚಿದಾನಂದ್ ಸೇರಿದಂತೆ ಹಲವರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News