ಕಲಬುರಗಿ | ಹೆಣ್ಣು ಗಂಡೆಂಬ ತಾರತಮ್ಯ ಮಾಡದಿರಿ : ಶಾಸಕ ಡಾ.ಅಜಯಸಿಂಗ್
ಕಲಬುರಗಿ : ಹೆಣ್ಣು ಎಂಬ ಕಾರಣಕ್ಕೆ ಭ್ರೂಣ ಹತ್ಯೆಯನ್ನು ಮಾಡದಿರಿ. ನಿಮ್ಮ ಮಕ್ಕಳಲ್ಲಿ ಹೆಣ್ಣು ಗಂಡೆಂಬ ತಾರತಮ್ಯ ಮಾಡದಿರಿ ಎಂದು ಕೆಕೆಆರ್ ಡಿಬಿ ಅಧ್ಯಕ್ಷ ಹಾಗೂ ಶಾಸಕ ಡಾ.ಅಜಯಸಿಂಗ್ ಕರೆ ನೀಡಿದರು.
ಜೇವರ್ಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭೀವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮಕ್ಕೆ ಸೊಮುವಾರ ಚಾಲನೆ ನೀಡಿ ಮಾತನಾಡಿದರು.
ಯಾವುದೇ ತಾರತಮ್ಯ ವಿಲ್ಲದೆ ನಮ್ಮ ಮಕ್ಕಳನ್ನ ಬೆಳೆಸಬೇಕು. ಹೆಣ್ಣು ಕೂಡ ಗಂಡಿಗೆ ಸರಿಸಮಾನಳು ಎಂಬುವುದು ನಾವು ಅರಿತಾಗ ಮಾತ್ರ ಸಮಾಜ ಮುಂದುವರೆಯುತ್ತದೆ. ಹೆಣ್ಣು ಮಕ್ಕಳನ್ನ ಕೂಡ ಗಂಡಿನಷ್ಟೆ ಶಿಕ್ಷಣವನ್ನು ನೀಡಬೇಕು. ಹೆಣ್ಣು ಕೂಡ ಎಲ್ಲಾ ರಂಗದಲ್ಲು ತನ್ನದೆ ಚಾಪು ಮುಡಿಸುತ್ತಿದ್ದಾಳೆ. ಸಾಧನೆಯ ಹಾದಿಯಲ್ಲಿ ಹೆಣ್ಣು ಮಕ್ಕಳು ಕೂಡ ಗಂಡಿನ ಸರಿಸಮನಾಗಿ ಪೈಪೋಟಿ ಮಾಡುತ್ತಿರುವುದು ನಾವುಗಳು ಮರೆಯಬಾರದು ಎಂದರು.
ಈ ಸಂದರ್ಭಧಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ, ರವಿಂದ್ರ ರೆಡ್ಡಿ, ನಾಗಮೂರ್ತಿ ಶೀಲವಂತ, ವಿಶ್ವನಾಥ ಬಿರಾದಾರ, ಮುರಗೇಶ ಗುಣಾರಿ, ಡಾ.ವಿಜಯಲಕ್ಷ್ಮೀ ಪಾಟೀಲ್, ದುರ್ಗಮ್ಮ ಗೌನಳ್ಳಿ, ಶ್ರೀಮತಿ ರೇಣುಕಾ, ಬಾಗ್ಯಜ್ಯೋತಿ, ದೀಪಾರೆಡ್ಡಿ, ರುಕ್ಮೀಣಿ, ನಾಗಮ್ಮ ಕುರಡೇಕರ್, ಸುಧಾ ಜೋಶಿ, ಫಾತಿಮಾ, ಸುಮಂಗಲಾ, ಶಿಲಾ, ಗಾಯಿತ್ರಿ, ಆಶಾಬೇಗಂ, ಭಾರತಿ ಗುಜಗುಂಡ, ಸ್ವಾತಿ ಕೋಣಿನ್, ಸಾಯಬಣ್ಣ ಪೂಜಾರಿ, ಅವಿನಾಶ ಜಮದಾರ, ಪ್ರಕಾಶ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ರಾಜಕಿಯ ಮುಖಂಡರು ಉಪಸ್ಥಿತರಿದ್ದರು.