ಸಾಂದರ್ಭಿಕ ಚಿತ್ರ | Photo credit : AI

ಕಲಬುರಗಿ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ, ಸಾರ್ವಜನಿಕರ ದೂರುಗಳನ್ನು ಸಕಾಲದಲ್ಲಿ ಪರಿಹರಿಸುವ ಉದ್ದೇಶದಿಂದ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ, ತಾಲೂಕುವಾರು ಕುಡಿಯುವ ನೀರಿನ ನಿಯಂತ್ರಣಾ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಕುಡಿಯುವ ನೀರಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಎದುರಾದಲ್ಲಿ ಸಾರ್ವಜನಿಕರು ನಿಯಂತ್ರಣಾ ಕೊಠಡಿಗಳ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ದೂರು ಅಥವಾ ಅಹವಾಲು ಸಲ್ಲಿಸಬಹುದು ಎಂದು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಸಂಕನೂರ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜಗದೇವಪ್ಪ ಜೀವಣಗಿ ಅವರನ್ನು ಜಿಲ್ಲಾ ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಅವರ ಮೊಬೈಲ್ ಸಂಖ್ಯೆ 9986887077. ಜಿಲ್ಲಾ ಮಟ್ಟದ ಕುಡಿಯುವ ನೀರಿನ ನಿಯಂತ್ರಣಾ ಕೊಠಡಿಯ ದೂರವಾಣಿ ಸಂಖ್ಯೆ 9483563783.

ತಾಲೂಕುವಾರು ನೋಡಲ್ ಅಧಿಕಾರಿಗಳು ಹಾಗೂ ಕುಡಿಯುವ ನೀರಿನ ನಿಯಂತ್ರಣಾ ಕೊಠಡಿಗಳ ಸಂಪರ್ಕ ಸಂಖ್ಯೆಗಳ ವಿವರ ಇಂತಿದೆ.

ಆಳಂದ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ (ಮೊ.ಸಂ. 6363532653) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸಂಗಮೇಶ (ಮೊ.ಸಂ. 8147315040) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 8277943402.

ಅಫಜಲಪುರ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ರಾಠೋಡ (ಮೊ.ಸಂ. 9886919172) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅರುಣ ಕುಮಾರ್ (ಮೊ.ಸಂ. 9108768598) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 9480765172.

ಚಿಂಚೋಳಿ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ರಾಠೋಡ (ಮೊ.ಸಂ. 9731254117) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಉಮೇಶ ರಾಠೋಡ (ಮೊ.ಸಂ. 9686369611) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 9483593179.

ಚಿತ್ತಾಪುರ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ಅಕ್ರಮ (ಮೊ.ಸಂ. 9741828507) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ ಅಕ್ಕಿ (ಮೊ.ಸಂ. 9663802864) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 9483507267.

ಜೇವರ್ಗಿ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ (ಮೊ.ಸಂ. 7760640550) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುಶಾಂತಯ್ಯ ಗದ್ದಗಿಮಠ (ಮೊ.ಸಂ. 9449446121) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 8762767573.

ಕಲಬುರಗಿ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ (ಮೊ.ಸಂ. 6363532653) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಬಿ.ಕೆ. (ಮೊ.ಸಂ. 9740339572) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 8277334607.

ಕಾಳಗಿ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಡಿಗ್ಗಿ (ಮೊ.ಸಂ. 9590709252) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಚಿತ್ತಾಪುರದ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ ಅಕ್ಕಿ (ಮೊ.ಸಂ. 9663802864) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 8762582425.

ಕಮಲಾಪುರ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಪಾಟೀಲ್ (ಮೊ.ಸಂ. 9611812220) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಕಲಬುರಗಿಯ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ ಬಿ.ಕೆ. (ಮೊ.ಸಂ. 9740339572) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 9482163038.

ಸೇಡಂ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಪಟೇಲ್ (ಮೊ.ಸಂ. 9900290355) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪರಮೇಶ್ವರ (ಮೊ.ಸಂ. 9880454018) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 9480368020.

ಯಡ್ರಾಮಿ ತಾಲೂಕು: ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ (ಮೊ.ಸಂ. 7760640550) ಅವರನ್ನು ತಾಲೂಕು ನೋಡಲ್ ಅಧಿಕಾರಿಯಾಗಿ ಹಾಗೂ ಜೇವರ್ಗಿಯ ಆರ್‌ಡಬ್ಲ್ಯೂಎಸ್‌ನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಗುರುಶಾಂತಯ್ಯ ಗದ್ದಗಿಮಠ (ಮೊ.ಸಂ. 9449446121) ಅವರನ್ನು ತಾಂತ್ರಿಕ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ನಿಯಂತ್ರಣಾ ಕೊಠಡಿ ಸಂಖ್ಯೆ: 8762761547.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅಭಾವ, ನೀರು ಸರಬರಾಜಿನಲ್ಲಿ ವ್ಯತ್ಯಯ, ಪೈಪ್‌ಲೈನ್ ದುರಸ್ತಿ, ಕಲುಷಿತ ನೀರು ಸರಬರಾಜು ಹಾಗೂ ಇತರೆ ಕುಡಿಯುವ ನೀರಿನ ಸಮಸ್ಯೆಗಳು ಎದುರಾದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲಾ ನಿಯಂತ್ರಣಾ ಕೊಠಡಿಗೆ ಕರೆ ಮಾಡಬಹುದು. ದೂರು ಸಲ್ಲಿಸುವಾಗ ಗ್ರಾಮ ಅಥವಾ ವಾರ್ಡ್‌ನ ಹೆಸರು ಹಾಗೂ ಸಮಸ್ಯೆಯ ವಿವರಗಳನ್ನು ನೀಡಬೇಕು ಎಂದು ರಾಹುಲ್ ಸಂಕನೂರ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor