ಕಲಬುರಗಿ | ಚಾಲಕರ ದಿನಾಚರಣೆ
ಕಲಬುರಗಿ : ಆಳಂದ ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ 'ಚಾಲಕರ ದಿನಾಚರಣೆ' ಅನ್ನು ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಯುವ ಮುಖಂಡ ಸುನಿಲ ಹಿರೋಳಿಕರ್, ಸೂರಜ್ ಪತಂಗೆ ಸೇರಿದಂತೆ ಸಾರ್ವಜನಿಕ ಪ್ರಯಾಣಿಕರು, ವಿದ್ಯಾರ್ಥಿಗಳು, ಹಾಗೂ ಗ್ರಾಮಗಳ ಗಣ್ಯರು ಸೇರಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್ಟಿಸಿ) ಚಾಲಕರಿಗೆ ಗುಲಾಬಿ ಹೂವು ನೀಡಿ ಗೌರವ ಸಲ್ಲಿಸಿದರು.
ಚಾಲಕರು ಸಮುದಾಯದ ಬೆನ್ನಿಗೆ ಬಲ :
ಚಾಲಕರು ಸಮುದಾಯದ ನೈತಿಕತೆ ಹೆಚ್ಚಿಸಲು ಹಾಗೂ ರಸ್ತೆ ಸುರಕ್ಷತಾ ಉಪಕ್ರಮದ ಭಾಗವಾಗಿ ಈ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಕೆಕೆಆರ್ಟಿಸಿ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ. "ಚಾಲಕರ ಕೊಡುಗೆ ಗುರುತಿಸಿ, ಅವರನ್ನು ಗೌರವಿಸುವುದು ನಮ್ಮ ಆದ್ಯತೆಯಾಗಿದೆ" ಎಂಬುದಾಗಿ ಅವರು ಹೇಳಿದರು.
ಚಾಲಕರಿಗೆ ಗುಲಾಬಿ ಹೂವು ನೀಡಿ ಅಭಿನಂದನೆ ಸಲ್ಲಿಸಿದ ಯುವ ಮುಖಂಡ ಸುನಿಲ್ ಹಿರೋಳಿಕರ್ ಈ ಸಂದರ್ಭದಲ್ಲಿ ಮಾತನಾಡಿ, "ನಮ್ಮ ಜೀವನದ ಅನೇಕ ಪ್ರಾಮುಖ್ಯ ಕ್ಷಣಗಳಲ್ಲಿ ಚಾಲಕರ ಪಾತ್ರ ಅತೀವ ಮುಖ್ಯವಾಗಿದೆ. ಅವರು ನಮ್ಮ ಸುರಕ್ಷತೆಗೆ, ಸುಗಮ ಪ್ರಯಾಣಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ದಿನಾಚರಣೆ ಹೃದಯಸ್ಪರ್ಶಿ ಔದಾರ್ಯವಾಗಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಾಲಕರ ಸೇವೆಯನ್ನು ಶ್ಲಾಘಿಸುವ ಜೊತೆಗೆ ಸಾರ್ವಜನಿಕರ ಧನ್ಯತೆಯ ನೋಟ ಕಂಡುಬಂದಿತು.