ಕಲಬುರಗಿ | ಹೋರಾಟಗಾರ್ತಿ ಡಾ.ಮೀನಾಕ್ಷಿ ಬಾಳಿಗೆ ಮಹಿಳಾ ವಿವಿಯಿಂದ ಗೌರವ ಡಾಕ್ಟರೇಟ್
Update: 2025-01-08 18:32 IST
ಕಲಬುರಗಿ : ಮಹಿಳಾ ಹೋರಾಟಗಾರ್ತಿ, ಚಿಂತಕಿ ಡಾ.ಮೀನಾಕ್ಷಿ ಬಾಳಿ ಅವರು ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಗೆ ಭಾಜನರಾಗಿದ್ದಾರೆ.
ಕರ್ನಾಟಕ ರಾಜ್ಯಪಾಲರು ವಿಜಯಪುರ ವಿಶ್ವ ವಿಶ್ವವಿದ್ಯಾಲಯ 16ನೇ ವಾರ್ಷಿಕ ಘಟಿಕೋತ್ಸವದ ನಿಮಿತ್ತ ಗೌರವ ಡಾಕ್ಟರೇಟ್ ಗೆ ನಾಮನಿರ್ದೇಶನ ಮಾಡಿರುವ ಹಿನ್ನೆಲೆಯಲ್ಲಿ ಜ.9 ರಂದು ಜರುಗಲಿರುವ ಘಟಿಕೋತ್ಸವ ಸಮಾರಂಭದಲ್ಲಿ ಮೀನಾಕ್ಷಿ ಬಾಳಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದೆಂದು ವಿವಿಯ ಕುಲಪತಿಗಳಾದ ಪ್ರೊ. ಬಿ.ಕೆ. ತುಳಸಿಮಾಲ ಆದೇಶದಲ್ಲಿ ತಿಳಿಸಿದ್ದಾರೆ.