×
Ad

ಕಲಬುರಗಿ | ಕಲ್ಯಾಣ ನಗರ ವಸತಿ ನಿಲಯದಲ್ಲಿ ಗಿಡ‌ ನೆಟ್ಟು ಪರಿಸರ ದಿನ ಆಚರಣೆ

Update: 2025-07-08 20:36 IST

ಕಲಬುರಗಿ: ಕಲಬುರಗಿ ನಗರದ ಕಲ್ಯಾಣ ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯದಲ್ಲಿ ಇತ್ತೀಚೆಗೆ ಗಿಡ ನೆಡುವುದರ ಮೂಲಕ ಪರಿಸರ ದಿನ ಆಚರಣೆ ಮಾಡಲಾಯಿತು.

ಇತ್ತೀಚೆಗೆ ವಿಧಾನ ಪರಿಷತ್ ಶಾಸಕ ಸಾಯಬಣ್ಣ ತಳವಾರ್ ಅವರು ಭೇಟಿ ನೀಡಿ ವಸತಿ ನಿಲಯದಲ್ಲಿನ‌ ಸ್ವಚ್ಚತೆ ಇಲ್ಲದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಪೂರೈಕೆ ಮಾಡುವಂತೆ ತಾಕೀತು ಮಾಡಿದಲ್ಲದೆ ಗಿಡ ಬೆಳೆಸಿ ನಿಲಯದಲ್ಲಿ ಉತ್ತಮ ಪರಿಸರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರು.

ಶಾಸಕರ ನಿರ್ದೇಶನದಂತೆ ನಿಲಯದ ಆವರಣ ಸ್ವಚ್ಛಗೊಳಿಸಲಾಗಿದ್ದು, ನಿಲಯಾರ್ಥಿಗಳ ಸಹಯೋಗದೊಂದಿಗೆ ಹಾಸ್ಟೆಲ್ ನಲ್ಲಿ ಗಿಡ ನೆಡಲಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ರುಚಿ-ಶುಚಿಯಾದ ಉಪಹಾರ, ಊಟ ಪೂರೈಸಲಾಗುತ್ತಿದೆ. ಮಕ್ಕಳ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ವ್ಯಾಯಾಮ, ಯೋಗಾಭ್ಯಾಸ ಮಾಡಿಸಲಾಗುತ್ತಿದೆ ಎಂದು ಕಲಬುರಗಿ ತಾಲೂಕಿನ ತಾಲೂಕಾ ಕಲ್ಯಾಣ ಅಧಿಕಾರಿ ಶರಣಬಸಪ್ಪ ಪಾಟೀಲ್ ಅವರು ಸ್ಪಷ್ಟಪಡಿಸಿದ್ದಾರೆ.

ಸ್ವಚ್ಛತಾ ಕಾರ್ಯದಲ್ಲಿ ಕಿರಿಯ ನಿಲಯ ಮೇಲ್ವಿಚಾರಕ ರಾಮದಾಸ್, ಅಡುಗೆ ಸಿಬ್ಬಂದಿಗಳಾದ ಪವನ್, ರಿಯಾಝ್‌, ಮಾಳಮ್ಮ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News