×
Ad

Kalaburagi | ಅಬಕಾರಿ ಇಲಾಖೆ: 69 ವಾಹನಗಳನ್ನು ಹರಾಜಿನ ಮೂಲಕ ವಿಲೇವಾರಿ

Update: 2026-07-05 17:40 IST

ಸಾಂದರ್ಭಿಕ ಚಿತ್ರ PC | GROK

ಕಲಬುರಗಿ: ಕಲಬುರಗಿ ವಲಯ ನಂ.1 ಮತ್ತು ವಲಯ ನಂ.2ರಲ್ಲಿ, ಆಳಂದ, ಜೇವರ್ಗಿ, ಚಿತ್ತಾಪುರ, ಸೇಡಂ ಹಾಗೂ ಚಿಂಚೋಳಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಗಳಲ್ಲಿರುವ ವಿವಿಧ ಮಾದರಿಯ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡ ಒಟ್ಟು 69 ವಿವಿಧ ಮಾದರಿಯ ವಾಹನಗಳನ್ನು ಆಯಾ ವಲಯಗಳ ಅಬಕಾರಿ ನಿರೀಕ್ಷಕರ ಕಚೇರಿಗಳಲ್ಲಿ ಕೆಳಕಂಡ ದಿನಾಂಕಗಳಂದು ಅಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಬಹಿರಂಗ ಹರಾಜಿನ ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಬಹಿರಂಗ ಹರಾಜು ಮಾಡುವ ದಿನಾಂಕ ಹಾಗೂ ಸ್ಥಳದ ವಿವರ ಇಂತಿದೆ.

ಜುಲೈ 7ರಂದು: ಕಲಬುರಗಿ ಅಬಕಾರಿ ನಿರೀಕ್ಷಕರ ವಲಯ ನಂ. 1ರ ಕಚೇರಿಯಲ್ಲಿ 5 ವಾಹನಗಳು ಹಾಗೂ ಚಿತ್ತಾಪುರ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 8 ವಾಹನಗಳು.

ಜುಲೈ 8ರಂದು: ಕಲಬುರಗಿ ಅಬಕಾರಿ ನಿರೀಕ್ಷಕರ ವಲಯ ನಂ. 2ರ ಕಚೇರಿಯಲ್ಲಿ 14 ವಾಹನಗಳು ಹಾಗೂ ಸೇಡಂ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 10 ವಾಹನಗಳು.

ಜುಲೈ 9ರಂದು: ಆಳಂದ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 17 ವಾಹನ ಹಾಗೂ ಚಿಂಚೋಳಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 7 ವಾಹನಗಳು.

ಜುಲೈ 10ರಂದು: ಜೇವರ್ಗಿ ಅಬಕಾರಿ ನಿರೀಕ್ಷಕರ ವಲಯ ಕಚೇರಿಯಲ್ಲಿ 8 ವಾಹನಗಳು.

ಹರಾಜಿನ ಷರತ್ತು ಮತ್ತು ನಿಬಂಧನೆಗಳು ಸೇರಿದಂತೆ ವಾಹನದ ಮಾದರಿ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ವಾಹನವಿರುವ ಆಯಾ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಬೆಳಿಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News