ಕಲಬುರಗಿ | ಶ್ರೀಕಾಂತ ಮೇಂಗಜಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಕಲಬುರಗಿ: ಆಳಂದ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ಮೇಂಗಜಿಗೆ ಬಡ್ತಿ ಪಡೆದು ಬೀದರ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿಯಾಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮವನ್ನು ಇಲಾಖೆಯ ಸಿಬ್ಬಂದಿಗಳು ಕಚೇರಿಯಲ್ಲಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಕಾಂತ ಮೇಂಗಜಿ ಅವರು, ತಮ್ಮ ಸೇವಾ ಅವಧಿಯ ಸಾಧನೆಗಳನ್ನು ಸ್ಮರಿಸಿಕೊಂಡರು. “ಆಳಂದದಲ್ಲಿ ಎರಡು ಅವಧಿಗಳ ಕಾಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವ ಅವಕಾಶ ದೊರೆತಿದ್ದು, ಈ ಅವಧಿಯಲ್ಲಿ 22 ಹೊಸ ಅಂಗನವಾಡಿ ಕಟ್ಟಡಗಳ ಮಂಜೂರಾತಿ ಮತ್ತು ನಿರ್ಮಾಣ ಮಾಡಿಸಲು ಸಾಧನೆಯಾಯಿತು. ಎಲ್ಲ ಅಂಗನವಾಡಿ ಕೇಂದ್ರಗಳ ಸಿಬ್ಬಂದಿಗಳ ಸಹಕಾರದಿಂದ ತಾಲ್ಲೂಕಿನಲ್ಲಿ ಅಪೌಷ್ಠಿಕತೆ ಕಡಿಮೆಯಾಗಲು ಸಾಧ್ಯವಾಯಿತು. ಬಾಲ್ಯ ವಿವಾಹ ತಡೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಯಿತು” ಎಂದು ಅವರು ಹೇಳಿದರು.
ದಲಿತ ಮುಖಂಡ ದಯಾನಂದ ಶೇರಿಕಾರ, ಮಲ್ಲಿಕಾರ್ಜುನ ಬೋಳಣಿ, ಧರ್ಮಾ ಬಂಗರಗಿ, ಎ. ಸಿಡಿಪಿಒ ಚಂದ್ರಕಾಂತ ಹಿರೇಮಠ, ಹಿರಿಯ ಮೇಲ್ವಿಚಾರಕಿ ಬೇಬಿನಂದಾ ಪಾಟೀಲ, ಸೂರ್ಯಕಾ ಪೂಜಾರಿ, ಭಾಗ್ಯಜೋತಿ, ಮೇಲ್ವಿಚಾರಕಿ ಮಹಾದೇವಿ ವಚ್ಛೆ, ಮೀನಾಕ್ಷಿ ಹಿರೇಮಠ, ಕವಿತಾ ಮುಚ್ಚಳಂಬಿ, ಪದ್ಮಾವತಿ ಪಾಟೀಲ, ಸ್ನೇಹ ಜಾಗಿರದಾರ, ಕಲಾವತಿ, ಲಕ್ಷಿಗೌಡರ್, ಗೋದಾವತಿ ಪತ್ತಾರ, ತಬಸುಮ್, ಭಾಗಿರಥಿ, ನಂದಾ, ಸಿಬ್ಬಂದಿ ಅಪ್ಪಾಸಾಹೇಬ, ಜೈ ಪ್ರಕಾಶ, ಪ್ರಶಾಂತ ಶರಣಮಠ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಮಾಜ ಮುಖಂಡರು ಸಿಡಿಪಿಒ ಶ್ರೀಕಾಂತ ಮೇಂಗಜಿ ಹಾಗೂ ಅವರ ಪತ್ನಿ ಕವಿತಾ ಮೇಂಗಜಿ ಅವರನ್ನು ಪ್ರತ್ಯೇಕವಾಗಿ ಸನ್ಮಾನಿಸಿ ಗೌರವಿಸಿದರು.