ಕಲಬುರಗಿ | ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರ : ಜಿಲ್ಲಾಧಿಕಾರಿ ಬಿ.ಫೌಝಿಯಾ ತುರನ್ನುಮ್ ಚಾಲನೆ
ಕಲಬುರಗಿ : ಆನಂದ್ ನಗರದ ಸೆಂಟ್ ಮೇರಿ ಚರ್ಚ್ ಎದುರುಗಡೆ ಇರುವ ವಂಶ ಟೆಸ್ಟ್ ಟ್ಯೂಬ್ ಬೇಬಿ ಆಂಡ್ ಲ್ಯಾಪ್ರೋಸ್ಕೋಪಿ ಸೆಂಟರ್ ನಲ್ಲಿ ಮಾತಿನ ಮನೆ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಜಿಲ್ಲಾಧಿಕಾರಿ ಬಿ.ಫೌಝಿಯಾ ತುರನ್ನುಮ್ ಉದ್ಘಾಟಿಸಿದರು.
ಉಚಿತ ಆರೋಗ್ಯ ಶಿಬಿರದಲ್ಲಿ ಮಹಿಳೆಯರಿಗೆ ಕ್ಯಾನ್ಸರ್ ನಿಯಂತ್ರಣದ ಲಸಿಕೆ ವಿತರಿಸಲಾಯಿತು. ಸುಮಾರು 2,000 ರೂ.ಗಳ ಮೌಲ್ಯದ ಲಸಿಕೆಯನ್ನು ಶಿಬಿರದಲ್ಲಿ ಕೇವಲ 1,600ರೂ. ಗಳಿಗೆ ವಿತರಿಸಲಾಯಿತು. ಗರ್ಭಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಉಚಿತ ಮೆಮೋಗ್ರಾಫಿ, ಉಚಿತ ಬಿಎಂಡಿ ಪರೀಕ್ಷೆ ಮಾಡಲಾಯಿತು.
ಉದ್ಯಮಶೀಲ ಮಹಿಳೆಯರು 8 ಮಳಿಗೆಗಳಲ್ಲಿ ತಮ್ಮ ಉತ್ಪಾದನೆಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಿದರು.
ವಿವಿಧ ಕ್ಷೇತ್ರಗಳ ಸಾಧಕಿಯರಾದ ಡಾ.ರಾಣಿ ಸುವರ್ಣಾದೇವಿ, ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ಭಾರತಿಬಾಯಿ ಧನ್ನಿ, ನ್ಯಾಯವಾದಿ ಡಾ.ಅರ್ಚನಾ ತಿವಾರಿ, ಭರತ ನಾಟ್ಯ ಕಲಾವಿದೆ ಡಾ.ಶುಭಾಂಗಿ, ಪ್ರಾಚಾರ್ಯೆ ದಿವ್ಯಾ ಕುಲಕರ್ಣಿ, ಉಪಳಾಂವದ ಶಿಕ್ಷಕಿ ಜ್ಯೋತಿ ಪಾಟೀಲ್, ಉದ್ಯಮಿ ಕಮಲಾಬಾಯಿ ಚಿಟಗುಪ್ಪ ಅವರನ್ನು ಸನ್ಮಾನಿಸಲಾಯಿತು.
ಲಕ್ಕಿ ಡ್ರಾ ಸಹ ಏರ್ಪಡಿಸಲಾಯಿತು. ವಿವಿಧ ಸ್ಪರ್ಧಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ.ನಿರ್ಮಲಾ ಹಿರೇಮಠ, ಆಸ್ಪತ್ರೆಯ ವೈದ್ಯರಾದ, ಭಾಗ್ಯಶ್ರೀ ಶರಣಪ್ರಕಾಶ ಪಾಟೀಲ, ಡಾ.ಮೀತಾ ಅಂಗಡಿ ಮತ್ತು ಡಾ.ಮದುರಾ ಬನಾಳೆ, ಡಾ.ದಿವ್ಯಾ ಕುಲಕರ್ಣಿ, ಸುಶೀಲ್ ಕುಲಕರ್ಣಿ ಸೇರಿದಂತೆ ಇತರರಿದ್ದರು.