ಕಲಬುರಗಿ | 'ಸರ್ವರು ಸಮಾನರು' ಎಂಬ ಸಂದೇಶ ಬಿತ್ತಿದ ಮಹಾನ್ ವ್ಯಕ್ತಿ ಗೌತಮ್ ಬುದ್ಧ: ಶಾಸಕ ಅಲ್ಲಮ ಪ್ರಭು ಪಾಟೀಲ್
ಕಲಬುರಗಿ : ಶಾಂತಿಯ ಸಂದೇಶದ ಮೂಲಕ ಸಾಮಾಜಿಕ ಧಾರ್ಮಿಕ ವಿಚಾರಗಳ ಮುಖಾಂತರ ಸಮಾಜದಲ್ಲಿ ಸರ್ವರು ಸಮಾನರು ಎಂಬ ಸಂದೇಶವನ್ನು ನೀಡಿದ ಮಹಾನ ವ್ಯಕ್ತಿ ಗೌತಮ ಬುದ್ದ ಅವರಾಗಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಮ ಪ್ರಭು ಪಾಟೀಲ್ ಹೇಳಿದರು.
ಸೋಮವಾರದಂದು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕಲಬುರಗಿಯ ಜಗತ್ ವೃತ್ತದ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆ ಎದುರಗಡೆ ಬಿ.ಶ್ಯಾಮಸುಂದರ ರಸ್ತೆಯ ಲುಂಬಿನ ಉದ್ಯಾನವನದಲ್ಲಿ 2,569ನೇ ವೈಶಾಖ ಬುದ್ಧ ಪೂರ್ಣಿಮೆ ದಿನದಂದು ಬುದ್ಧ ಪ್ರತಿಮೆಗೆ ಪುಷ್ಪ ಸುಗಂಧ ಅರ್ಪಿಸುವ ಮೂಲಕ ಉದ್ಫಾಟಿಸಿ, ಮಾತನಾಡಿದರು.
ಆಸೆಯೇ ದು:ಖಕ್ಕೆ ಮೂಲ ಎಂಬುದರ ಆಶಯದಂತೆ ರಾಜಮನೆತನದ ಎಲ್ಲ ವೈಭೋಗಗಳನ್ನು ತ್ಯಾಗ ಮಾಡಿ ಸಮಾಜದಲ್ಲಿ ಸರ್ವೋನ್ನತ್ತರ ಒಳಿತಿಗಾಗಿ ಶ್ರಮಿಸಿದ ಮಹಾನ ವ್ಯಕ್ತಿ ಗೌತಮ್ ಬುದ್ಧ ಅವರು ವಿಶ್ವಕ್ಕೆ ಶಾಂತಿಯ ಮೂಲಕ ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಬುದ್ದ ಜಯಂತಿ ಸರ್ಕಾರವು ಪ್ರಥಮ ಬಾರಿಗೆ ವಿಜೃಂಭಣೆಯಿಂದ ಆಚರಣೆಯನ್ನು ಮಾಡುತ್ತಿರುವುದು ಸಂತೋಷದ ವಿಷಯ ಎಂದರು.
ಪ್ರತಿಯೊಬ್ಬರು ಗೌತಮ್ ಬುದ್ಧನ ವಿಚಾರಗಳು ಮತ್ತು ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಇಂತಹ ಮಹಾನ ವ್ಯಕ್ತಿಗಳ ಜೀವನ ಎಲ್ಲರಿಗೂ ಆದರ್ಶವಾಗಬೇಕೆಂದು ಹೇಳಿದರು.
ಬುದ್ದಿಷ್ಟ್ ವಲ್ಸ್ ಅಲೆಯನ್ಸ್ ಉಪಾಧ್ಯಕ್ಷರಾದ ಡಾ.ಪೂಜ್ಯ ಭಂತೆ ಧಮ್ಮನಾಗ ಮಾಹಥೇರೋ ಬುದ್ದ ಜಯಂತಿ ಉದ್ದೇಶಿಸಿ ಪ್ರವಚನ ನೀಡಿದರು.
ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಪಂಚಶೀಲ ಧ್ವಜಾರೋಹಣ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ನೀಲಿ ಧ್ವಜಾರೋಹಣ ನೆರವೇರಿಸಿದರು.
ವೇದಿಕೆ ಮೇಲೆ ಗ್ಯಾರೆಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಭಂವಾರ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಸೇರಿದಂತೆ ಬೌದ್ಧ ಉಪಾಸಕರುಗಳಾದ ಮಹೇಶ ಹುಬಳಿ, ದೇವಿಂದ್ರಪ್ಪ ಕಪನೂರ, ವಿಠ್ಠಲ ಗೋಳಾ ಪವನ ವಳಕೇರಿ, ಪ್ರಕಾಶ ಮೂಲ ಭಾರತಿ, ಚಂದ್ರಕಾಂತ್ ಸೂರನ್ ಇದ್ದರು.
ಬೌದ್ಧ ಉಪಾಸಕ ಪ್ರಕಾಶ ಹದನೂರ, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಮೇಲ್ಮನಿ ವಂದಿಸಿದರು.