ಕಲಬುರಗಿ | ಮೇ 3, 4, 5ರಂದು ಹಜರತ್ ಬಾಬಾ ಫಕ್ರೋದ್ದೀನ್ ಕೂಡಿ ಜಾತ್ರಾ ಮಹೋತ್ಸವ
ಕಲಬುರಗಿ : ಪ್ರತಿವರ್ಷದಂತೆ ಈ ವರ್ಷವೂ ಜೇವರ್ಗಿ ತಾಲೂಕಿನ ಹಜರತ್ ಬಾಬಾ ಫಕ್ರೋದಿನ್ ಸಹರವರ್ದಿ ಕೂಡಿ 752ನೇ ಜಾತ್ರಾ ಮಹೋತ್ಸವ ದರ್ಗಾ ಕಮಿಟಿ, ಕೂಡಿ, ಕೋಬಾಳ ,ಬಣಮಿ, ಮಂದರವಾಡ, ಹಿಪ್ಪರಗಾ ಕೋನಾ, ಗ್ರಾಮಗಳ ಭಕ್ತರಿಂದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಜಗನ್ನಾಥ್ ನಿಂಗಬೋ ಕೋಬಾಳ್ ಅವರು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಮೇ 3ರಂದು ಸಂದಲ್ ಮಾಲಿ (ಗಂಧ) ಜರುಗಲಿದೆ. ಮೇ.4 ರಂದು ದೀಪ ಅಲಂಕಾರ (ಚಿರಾಗಾ) ಇದ್ದು ಅಂದು ಭಕ್ತಾದಿಗಳು ದರ್ಗಾಕ್ಕೆ ನೈವೇದ್ಯ ಸಲ್ಲಿಸುವುದು ವಿಶೇಷವಾಗಿದೆ ಹಾಗೂ ಇದೆ ದಿನ ಎಮ್.ಎಸ್.ಕೆ.ಮಿಲ್ ಜಿಲಾನಬಾದ ಗುಲ್ಬರ್ಗಾ ಸದ್ಭಕ್ತರಿಂದ ಸಹಿತ ದಿಪೋತ್ಸವ ಕಾರ್ಯಕ್ರಮ ಬಹು ವಿಜೃಂಭಣೆಯಿಂದ ನಡೆಸಲಾಗುತ್ತದೆ ಹಾಗೂ ರಾತ್ರಿ 10 ಗಂಟೆಯಿಂದ ಗೀಗಿ ಪದಗಳು ಹಾಗೂ ಖವಾಲಿ ಕಾರ್ಯಕ್ರಮ ನಡೆಯುತ್ತವೆ ಎಂದು ಹೇಳಿದ್ದಾರೆ.
ಮೇ 5ರಂದು ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 6:00 ವರೆಗೆ ಜಂಗಿ ಪೈಲ್ವಾನರ ಕುಸ್ತಿ ನಡೆಯಲಿವೆ, ಜೇವರ್ಗಿ ಹಾಗೂ ಗುಲ್ಬರ್ಗದಿಂದ ಕೂಡಿ ದರ್ಗಾದವರಿಗೆ ಹಾಗೂ ಕೂಡಿವರೆಗೆ ವಿಶೇಷ ಬಸ್ಸಿನ ಸೌಕರ್ಯ ಇರುತ್ತದೆ ತಿಳಿಸಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ನಾಡಿನ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.