×
Ad

ಕಲಬುರಗಿ | ಜಾತಿಗಣತಿ ಸಮೀಕ್ಷೆ ವೇಳೆ ಹೃದಯಘಾತದಿಂದ ಮುಖ್ಯಶಿಕ್ಷಕ ಮೃತ್ಯು : ಪರಿಹಾರಕ್ಕೆ ಆಗ್ರಹ

Update: 2025-05-16 17:00 IST

ಕಲಬುರಗಿ : ಜಾತಿ ಗಣತಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಘಾತದಿಂದ ಚಿಂಚೋಳಿ ತಾಲೂಕಿನ ಚತ್ರಸಾಲ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿ ಶಾಲೆಯ ಮುಖ್ಯಶಿಕ್ಷಕ ನಾಗಶೆಟ್ಟಿ ಬಾಸಪಳ್ಳಿ ಮೃತಪಟ್ಟಿರುವ ಘಟನೆ ನಡೆದಿದೆ.

ಚಿಂಚೋಳಿ ತಾಲೂಕಿನ ಬುರಗಪಳ್ಳಿ ಗ್ರಾಮದವರಾದ ನಾಗಶೆಟ್ಟಿ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನಲೆ ಶಾಲೆಯ ಖುರ್ಚಿಯಲ್ಲಿ ಕುಳಿತು ವಿಶ್ರಾಂತಿ ಪಡೆಯುವಾಗಲೇ ಅಸ್ವಸ್ಥರಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸ್ವಗ್ರಾಮ ಬುರುಗಪಳ್ಳಿಯ ಸ್ವಂತ ಹೊಲದಲ್ಲಿ ಶುಕ್ರವಾರ ಅಂತ್ಯಕ್ರಿಯೆ ನಡೆಯಿತು.

ಪರಿಹಾರಕ್ಕೆ ಒತ್ತಾಯ :

55 ವರ್ಷ ಮೇಲ್ಪಟ್ಟಿವರಿಗೆ ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬಾರದು ಎನ್ನುವ ಆದೇಶವಿದ್ದರೂ, ಶಿಕ್ಷಕ ನಾಗಶೆಟ್ಟಿ ಅವರನ್ನು ನೇಮಿಸಿಲಾಗಿದೆ. ಒಳ ಮೀಸಲಾತಿ ಜಾತಿಗಣತಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಹೃದಯಘಾತಕ್ಕೆ ಮೃತಪಟ್ಟಿದ್ದಾರೆ.

ಮುಖ್ಯಶಿಕ್ಷಕ ನಾಗಶೆಟ್ಟಿ ಬಾಸಪಳ್ಳಿ ಅವರ ಕುಟುಂಬಕ್ಕೆ ಸರಕಾರ 1 ಕೋಟಿ ರೂ. ಪರಿಹಾರ ಘೋಷಿಸಬೇಕು ಎಂದು ಅಖಿಲ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಘಟಕದ ಅಧ್ಯಕ್ಷ ವಕೀಲ ಶರಣುಪಾಟೀಲ ಮೋತಕಪಳ್ಳಿ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News