ಕಲಬುರಗಿ | ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಹೆವೇನ್ ಫೈಟರ್ ಸಂಸ್ಥೆ
ಕಲಬುರಗಿ: ಅಂತರರಾಷ್ಟ್ರೀಯ ಕರಾಟೆ ಪಟು ಅಖಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಸಂಸ್ಥೆಯ ಸ್ಪೋಟ್ರ್ಸ್ ಕಮಿಷನ್ ಚೇರ್ಮನ್ ಹೆವೇನ್ ಫೈಟರ್ಸ್ ಸಂಸ್ಥೆಯ ಅಧ್ಯಕ್ಷರಾದ ಮನೋಹರ ಕುಮಾರ್ ಬೀರನೂರವರ ತಂಡ 8 ಬಂಗಾರ, 17 ಬೆಳ್ಳಿ, 23 ಕಂಚಿನ ಪದಕ ಒಟ್ಟು 48 ಪ್ರಶಸ್ತಿ ಪದಕಗಳನ್ನು ಪಡೆದು ರಾಜ್ಯಕ್ಕೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕೀರ್ತಿಯನ್ನು ತಂದಿದ್ದಾರೆ.
ನ.1, 2ರ 2025 ರಂದು ಮೈಸೂರಿನ ಚಾಮುಂಡಿ ವಿಹಾರ ಇಂಡೋರ್ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು, ಎಐಎಸ್‍ಕೆಯು ಮತ್ತು ಎಕೆಎಸ್‍ಕೆಎ ಸಂಸ್ಥೆಯ ಅಧ್ಯಕ್ಷರು ಮಾಜಿ ವಿಧಾನ ಪರಿಷತ್ ಸದಸ್ಯರಾದ ಸಿ.ಎಸ್ ಅರುಣ್ ಮಾಚಯ್ಯ ರವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆದ 28ನೆಯ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ ರಾಜ್ಯದ ಹಲವು ಭಾಗಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.
ದರ್ಶನ್ ಎಂ ಬಳಿಚಕ್ರ ಎರಡು (2ಪದಕ), ಹರ್ಷಿತ್ ಚೌಹಾನ್ (2ಬಂಗಾರ ಪದಕ), ಬಸವರಾಜ್ ನಂದಳ್ಳಿ (1ಬಂಗಾರ ಪದಕ 1 ಕಂಚಿನ ಪದಕ), ಶ್ರೀಶೈಲ್ ಹೂಗಾರ್ (1ಬಂಗಾರ ಪದಕ 1 ಬೆಳ್ಳಿ ಪದಕ), ಗೌರಿ ಪ್ರವೀಣ್ ಕಾಂಬಳೆ (1ಬಂಗಾರ ಪದಕ 1 ಕಂಚಿನ ಪದಕ), ಶರಣ್ ರೆಡ್ಡಿ (1 ಬೆಳ್ಳಿ ಪದಕ), ಅಭಿಷೇಕ್ ಡಿ ರಾಥೋಡ್ (2 ಬೆಳ್ಳಿ ಪದಕ), ರೇವಣಸಿದ್ದಪ್ಪ (1 ಬೆಳ್ಳಿ ಪದಕ), ಆರವ ಹೇರೂರು (1 ಬೆಳ್ಳಿ ಪದಕ 1 ಕಂಚಿನ ಪದಕ), ಅಮರ್ ಎಂ ಎಸ್ (1 ಬೆಳ್ಳಿ ಪದಕ 1 ಕಂಚಿನ ಪದಕ), ಜಯಂತ್ ಎಂ ಬೈರಪ್ಪ (1 ಬೆಳ್ಳಿ ಪದಕ), ಅಭಿಷೇಕ್ ಎನ್ (1 ಬೆಳ್ಳಿ ಪದಕ), ಗಗನ್ ಆರ್ ಪತ್ತರ್ (2ಬೆಳ್ಳಿ ಪದಕ), ಸಾಗರ್ ಹೂಗಾರ್ (1ಬೆಳ್ಳಿ ಪದಕ 1 ಕಂಚಿನ ಪದಕ), ಹಣಮಂತ ಎಮ್ ಬಿರಾದಾರ (1 ಕಂಚಿನ ಪದಕ), ಸಹನಾ ಕೊಳಕೂರ್ (1 ಕಂಚಿನ ಪದಕ), ದಾಮಿನಿ ನಿಂಬಾಳ್ಕರ್ (1ಕಂಚಿನ ಪದಕ), ಬಸ್ಸಮ್ಮ ಆರ್ಸುರ್ (2ಕಂಚಿನ ಪದಕ), ಭಾಗ್ಯವಂತಿ ರಾಮಗೋಲ್ಡ್ (1 ಕಂಚಿನ ಪದಕ, ಶೇಷ್ಠ ಎಂ.ಬೀರನೂರ (1 ಕಂಚಿನ ಪದಕ), ಸಾತ್ವಿಕ್ ಡಿ (1 ಕಂಚಿನ ಪದಕ), ಸಾತ್ವಿಕ್ ಡಿ (1 ಕಂಚಿನ ಪದಕ), ಪವನ್ ಜಾದವ್ (1 ಕಂಚಿನ ಪದಕ), ನಾಗೇಂದ್ರ ಪಾಲ್ ಸಿಂಗ್ (1 ಕಂಚಿನ ಪದಕ), ರೋಹನ್ ಎಸ್ ಜಿ (2ಕಂಚಿನ ಪದಕ), ಮೌನೇಶ್ ಬಡಿಗೇರ್ (1 ಕಂಚಿನ ಪದಕ), ಸಂಜಯ್ ಕುಮಾರ್ ಒಡೆಯರ್ (2 ಕಂಚಿನ ಪದಕ), ಅಜಯ್ ಸಿಂಗ್ ಚೌಹಾಣ್ (2 ಕಂಚಿನ ಪದಕ), ಆರಾಧನ್ ಚಿಂಚೋಳಿ (2 ಕಂಚಿನ ಪದಕ), ಶ್ರೇಯಂಕ್ ವಿ (1 ಬಂಗಾರದ ಪದಕ), ಜೀವನ್ ಶಂಕರ್ (1 ಬೆಳ್ಳಿ ಪದಕ), ಸಾಯಿ ರಿಥಿವಿಕ್ ರಾಜಕುಮಾರ್ (1 ಕಂಚಿನ ಪದಕ), ಸಾಯಿ ರಿಥಿವಿಕ್ ರಾಜಕುಮಾರ್ (1 ಕಂಚಿನ ಪದಕ) ಇವರು ಪ್ರಶಸ್ತಿ ಪದಕಗಳನ್ನು ಪಡೆದಿದ್ದಾರೆ.
ಈ ಸಾಧನೆಗೆ ಕ್ರೀಡಾ ಅಭಿಮಾನಿಗಳು ರಾಜಕೀಯ ಮುಖಂಡರು, ಅಧಿಕಾರಿ ವರ್ಗದವರು ಮತ್ತು ಹೆವೆನ್ ಫೈಟರ್ ಸಂಸ್ಥೆಯ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆಂದು ಸಂಸ್ಥೆಯ ಕರಾಟೆ ಪಟು ಮಂಜುನಾಥ್ ನಾಲವರಕರ್, ತಂಡದ ಮ್ಯಾನೇಜರ್ ಭೀಮಶಂಕರ್ ಗೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.