ಕಲಬುರಗಿ | ಐಡಿಯಲ್ ವಿಡ್ಜಿ ಅಕಾಡೆಮಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟನೆ
Update: 2025-05-02 22:30 IST
ಕಲಬುರಗಿ : ನಗರದ ಹಳೆಯ ಜೇವರ್ಗಿ ರಸ್ತೆ ಸಿದ್ದೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಐಡಿಯಲ್ ವಿಡ್ಜಿ ಅಕಾಡೆಮಿ ಸ್ಪರ್ಧಾತ್ಮಕ ತರಬೇತಿ ಕೇಂದ್ರವನ್ನು ಕೆಬಿಎನ್ ವಿವಿ ಕುಲಾಧಿಪತಿ ಹಾಗೂ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ, ವಿಲಾಸವತಿ ಜತ್ತಿ ಖೂಬಾ, ಜಮಾಅತೆ ಇಸ್ಲಾಮಿಯ ಝಾಕೀರ್ ಹುಸೈನ್, ಅಬ್ದುಲ್ ಹಮೀದ್ ಫಾರಾ, ಮೊಯಿಬುದ್ಧಿನ್ ಖಾಜಿ, ಅಬ್ದುಲ್ ಹಮೀದ್ ಫಾರಾ, ಮೌಲಾನಾ ಷರೀಫ್, ಅಜೀಜ್ ಶಾ., ಶಬ್ಬೀರ್ ಅಹ್ಮದ್ ಖಾನ್, ಲಾಲ್ ಶೇಠ್, ವಂಶಿ ಕೃಷ್ಣ, ಸಂಸ್ಥೆಯ ಸಂಸ್ಥಾಪಕ ಮುಝಾಹೀದ್ ಪಾಷಾ ಸೇರಿದಂತೆ ಮತ್ತಿತರರು ಇದ್ದರು.