ಕಲಬುರಗಿ | ದೇವಂತಗಿಯಲ್ಲಿ ಕನಕದಾಸ ಜಯಂತಿ ಆಚರಣೆ
Update: 2024-11-18 19:29 IST
ಕಲಬುರಗಿ : ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ದಾಸ ಶ್ರೇಷ್ಠ ಭಕ್ತಕನಕದಾಸರ ಜಯಂತಿಯನ್ನು ಆಚರಿಸುವ ಮೂಲಕ ಅವರ ತತ್ವಗಳನ್ನು ಸ್ಮರಿಸಿ ನಮನ ಸಲ್ಲಿಸಿದರು.
ಕನಕದಾಸರ ಭಾವ ಚಿತ್ರಕ್ಕೆ ವಿಠ್ಠಲ್ ದೊಡ್ಮನಿ, ರಾಜೇಂದ್ರ ಪರಿಟ್, ಗುಂಡು ಪಾಟೀಲ್ ಪೂಜೆ ನೆರವೇರಿಸಿ ಮಾತನಾಡಿದ ಮುಖಂಡರು, ಕನಕದಾಸರು ಹೇಳಿಕೊಟ್ಟಿರುವಂತಹ ʼಕುಲಕುಲ ಎಂದು ಹೊಡೆದಾಡುವಿರಿ ಕುಲದ ನೆಲೆ ಏನಾದರೂ ಬಲ್ಲಿರಾʼ ಎಂದು ಪ್ರಶ್ನಿಸುವ ಮೂಲಕ ಜಾತಿಯತೆಯನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀಶೈಲ ನೈಕೋಡಿ, ಶಿವಕುಮಾರ್ ಚಿಂಚೋಳಿ, ಶರಣುಕುಮಾರ್ ಚಿಂಚೋಳಿ, ರಾಜೇಂದ್ರ ಪರಿಟ್ ದತ್ತಪ್ಪ ದೊಡ್ಮನಿ, ಧರ್ಮ ಕಾಂಬಳೆ, ಗುರುಶರಣ ನಾಯ್ಕೋಡಿ, ಕಲ್ಯಾಣರಾವ ಪಾಟೀಲ್, ಚಂದ್ರಕಾoತ್ ಚಿಂಚೋಳಿ ಸೇರಿದಂತೆ ಗ್ರಾಮದ ಅನೇಕರು ಉಪಸ್ಥಿತರಿದ್ದರು.