×
Ad

ಕಲಬುರಗಿ | ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Update: 2024-11-16 20:16 IST

ಕಲಬುರಗಿ : ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಕರ್ನಾಟಕ ಸಂಘಟನಾ ವೇದಿಕೆ (ಕನ್ನಡಿಗರ ಶಕ್ತಿ) ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತವಾಗಿ ಕನ್ನಡದ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಗರದಲ್ಲಿ ರಥದ ಮೇಲೆ ಕನ್ನಡಾಂಬೆ ಭವ್ಯ ಮೆರವಣಿಗೆ ಡೊಳ್ಳು ಕುಣಿತ, ಬಂಜಾರಾ ನೃತ್ಯ, ಹಲಗೆ ಇನ್ನಿತರ ಸಾಂಸ್ಕೃತಿಕ ಕಲಾ ತಂಡಗಳಿoದ ಮೆರವಣಿಗೆ ನೆರವೇರಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ 5 ಅಂಧ ಅನಾಥ ಮಕ್ಕಳನ್ನು ದತ್ತು ಸ್ವೀಕಾರ ಸಮಾರಂಭ ನಡೆಯಿತು.

ಈ ಸಂದರ್ಭದಲ್ಲಿ ಚಲನಚಿತ್ರ ನಟ ಪ್ರಜ್ವಲ್ ದೇವರಾಜ್, ಮಲ್ಲಿಕಾರ್ಜುನ ಮುತ್ಯಾ, ಶಾಸಕ ಅಲ್ಲಮಪ್ರಭು ಪಾಟೀಲ್, ಡಾ.ಸುರೇಶ ಶರ್ಮಾ, ಕರ್ನಾಟಕ ಸಂಘಟನಾ ವೇದಿಕೆ ಅಧ್ಯಕ್ಷ ಗುರುರಾಜ ಬಂಡಿ, ನೀಲಕಂಠರಾವ ಮೂಲಗೆ, ವಿಜಯಕುಮಾರ ಪಟ್ಟಣ, ರಾಘವೇಂದ್ರ ಕಲ್ಯಾಣಕರ್, ಸುರೇಶ ಬಡಿಗೇರ, ದಿವ್ಯಾ ಹಾಗರಗಿ, ಡಾ. ಸಂಪತ ಹಿರೇಮಠ, ಅಭಿಷೇಕ ಬಾಲಾಜಿ ಸೇರಿದಂತೆ ಇತರರು ಇದ್ದರು.

Full View 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News