×
Ad

ಕಲಬುರಗಿ | ಆತ್ಮರಕ್ಷಣೆಗೆ ಕರಾಟೆ ಉತ್ತಮ ಅಸ್ತ್ರ : ಡಾ.ಫಾರೂಕ್ ಮಣ್ಣೂರ

Update: 2025-06-09 17:36 IST

ಕಲಬುರಗಿ : 'ಆತ್ಮರಕ್ಷಣೆಗೆ ಕರಾಟೆ ಉತ್ತಮ ಅಸ್ತ್ರವಿದ್ದಂತೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಅದರ ತರಬೇತಿ ನೀಡುವುದು ಉತ್ತಮ' ಎಂದು ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಡಾ.ಫಾರೂಕ್ ಮಣ್ಣೂರ ಅಭಿಪ್ರಾಯಟ್ಟರು.

ನಗರದ ಆಶಿರ್ವಾದ ಕಲ್ಯಾಣ ಮಂಟಪದಲ್ಲಿ ಕೆಲರಿ ಎನ್ ರಿಯೋ ಅಕಾಡೆಮಿ ಆಫ್ ಇಂಡಿಯನ್ ಕರಾಟೆ ಹಾಗೂ ಅಜಯಕುಮಾರ್ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ ತರಬೇತಿ ಶಿಬಿರ ಹಾಗೂ ಬೆಲ್ಟ್ ಪರಿಕ್ಷೆಗೆ ಚಾಲನೆ ನೀಡಿ ಮಾತನಾಡಿದ ಅವರು, 'ಇಂದು ಸಮಾಜದಲ್ಲಿ ಹೆಚ್ಚುತ್ತಿರುವ ದುಷ್ಕೃತ್ಯ  ಪ್ರಕರಣಗಳಿಂದ ಜನ ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಗಂಡು-ಹೆಣ್ಣು ಇಬ್ಬರ ಆತ್ಮರಕ್ಷಣೆಗೆ ಅಗತ್ಯವಾಗಿ ಬೇಕಾದ ಕಲೆ ಕರಾಟೆಯಾಗಿದೆ. ಮನುಷ್ಯ ನಿರಾಯುಧವಾಗಿದ್ದರೂ ಕರಾಟೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಕರಾಟೆ ಕಲೆಯನ್ನು ಕರಗತ ಮಾಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರ್ಯಾಂಡ್ ಮಾಸ್ಟರ್ ಶ್ರೀನಿವಾಸ್‌, ಕಲಬುರಗಿ ಡಿಸ್ಟ್ರಿಕ್ಟ್ ಚೀಫ್ ಕೋಚ್ ರಾಜವರ್ಧನ್ ಜಿ ಚೌಹಾಣ್, ದಾದಾ ಸಾಹೇಬ್, ಶ್ರೀಕಾಂತ್ ಪೀಸಾಲ್, ಅಂಬರೀಶ್ ಜೋಗಿ, ಪ್ರತಾಪಸಿಂಗ್ ಪವಾರ್, ಪ್ರೇಮ್ ರಾಠೋಡ್, ಸುಶ್ಮಿತಾ ಸೇರಿದಂತೆ ಕರಾಟೆ ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News