×
Ad

ಕಲಬುರಗಿ | ಶಹಾಬಾದ್ ಬ್ಲಾಕ್ ಕಾಂಗ್ರೆಸ್ ಯುವ ಅಧ್ಯಕ್ಷರಾಗಿ ಕಿರಣ್ ಚವ್ಹಾಣ್ ಆಯ್ಕೆ

Update: 2025-02-13 20:17 IST

ಕಲಬುರಗಿ : ಶಹಾಬಾದ್ ನಗರದ ಬ್ಲಾಕ್ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷರಿಗಾಗಿ ನಡೆದ ಚುನಾವಣೆಯಲ್ಲಿ ನಗರದ ಕಿರಣ್ ಕುಮಾರ ಚವ್ಹಾಣ್ ರವರು 2ನೇ ಭಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಎಂ.ಎ.ರಶೀದ ಅವರ, ಯುವ ಘಟಕದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ದೇಶವನ್ನು ಮತ್ತು ಪಕ್ಷವನ್ನು ಮುನ್ನಡೆಸುವ ಸಬಲರೆಂದರೆ ಯುವಕರು. ಯುವಕರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಪ್ರವೇಶ ಮಾಡುವ ಮೂಲಕ ದೇಶದಲ್ಲಿನ ಬಡತನ, ನಿರೋದ್ಯೋಗ, ಬೆಲೆ ಏರಿಕೆಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಯುವಕರು ಜಾತಿ, ಧರ್ಮ, ವರ್ಗ ಎನ್ನದೆ ಜಾತ್ಯತೀತವಾಗಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡಬೇಕು. ಪಕ್ಷದ ನಿಷ್ಠರಾಗಿ ಪಕ್ಷದ ಮಾರ್ಗದಲ್ಲಿ ನಡೆಯುವ ಮೂಲಕ ಉತ್ತಮ ಯುವ ಶಕ್ತಿಯನ್ನು ಕಟ್ಟಬೇಕೆಂದು ಹೇಳಿದರು.

ನಂತರ ನೂತನ ಯುವ ಅಧ್ಯಕ್ಷರಾಗಿ ಆಯ್ಕೆಯಾದ ಕಿರಣ್ ಚವ್ಹಾಣ್ ಅವರನ್ನು ಸನ್ಮಾನಿಸಿ, ಸಿಹಿ ಹಂಚಿ ಶುಭ ಕೋರಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಕುಮಾರ ಚವ್ಹಾಣ್, ಹಾಷಮ್ ಖಾನ್, ಡಾ.ಅಹ್ಮದ ಪಟೇಲ, ನರಸಿಂಗ ರಾಠೋಡ, ಸುನಿಲ ಚವ್ಹಾಣ್, ಮಹ್ಮದ ಜಾವೀದ, ಶಮ್ಮಪಾದ ಮಚೆರ್ಂಟ್, ಸತೀಶ ಚಹ್ವಾಣ, ಅಮೀರ್ ಮಚೆರ್ಂಟ್, ರಮೇಶ ರಾಠೋಡ, ಮಹ್ನದ ಇಮ್ರಾನ್, ಮುನಾವರ್, ವಿಕಾಸ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News