ಕಲಬುರಗಿ | ವಕ್ಫ್ ಆಸ್ತಿಗಳ ದಾಖಲೆಗಳನ್ನು ಉಮೀದ್ ಪೋರ್ಟಲ್ ನಲ್ಲಿ ದಾಖಲಿಸಲು ಡಿ. 5 ಕೊನೆಯ ದಿನ
Update: 2025-10-17 20:41 IST
ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಮುತ್ತವಲ್ಲಿಗಳು, ಆಡಳಿತಾಧಿಕಾರಿಗಳು ಹಾಗೂ ಕೇರ್ ಟೇಕರ್ ಗಳು ಉಮೀದ್ ಪೋರ್ಟಲ್‍ನಲ್ಲಿ ಮೇಕರ್ ಆಗಿ ನೋಂದಣಿ ಮಾಡಿಕೊಂಡು ತಮಗೆ ಸಂಬಂಧಪಟ್ಟ ವಕ್ಫ್ ಸಂಸ್ಥೆಗಳ ವಿವರವನ್ನು ದಾಖಲಾತಿಗಳೊಂದಿಗೆ ಉಮೀದ್ ಪೋರ್ಟಲ್‍ನಲ್ಲಿ ನೋಂದಾಯಿಸಲು 2025ರ ಡಿ.5 ಕೊನೆಯ ದಿನವಾಗಿದೆ ಎಂದು ಕಲಬುರಗಿ ಜಿಲ್ಲಾ ವಕ್ಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದರಂತೆ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಅಧ್ಯಕ್ಷರು, ಮುತ್ತವಲ್ಲಿಗಳು, ಆಡಳಿತಾಧಿಕಾರಿಗಳು, ಕೇರ್ ಟೇಕರ್ ಗಳು ಉಮೀದ್ 2025 ಮತ್ತು ಅದರ ನಿಯಮಗಳ ಅಡಿಯಲ್ಲಿ ನಿಗದಿಪಡಿಸಿದ ದಾಖಲೆಗಳನ್ನು ಆನ್‍ಲೈನ್ ಮೂಲಕ ಉಮೀದ್ ಪೋರ್ಟಲ್‍ನಲ್ಲಿ ಸ್ವತಃ ಸಲ್ಲಿಸಲು ಅಥವಾ ಕಲಬುರಗಿ ಜಿಲ್ಲಾ ವಕ್ಫ್ ಕಚೇರಿಗೆ ಭೇಟಿ ನೀಡಿ, ಸಂಬಂಧಪಟ್ಟ ವಕ್ಫ್ ಸಂಸ್ಥೆ ಮತ್ತು ವಕ್ಫ್ ಆಸ್ತಿಗಳ ಮಾಹಿತಿಯನ್ನು ಉಮೀದ್ ಪೋರ್ಟಲ್‍ನಲ್ಲಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.