ಕಲಬುರಗಿ | ಕಾನೂನು ವಿವಿ ಘಟಿಕೋತ್ಸವ: ಸಿದ್ದಾರ್ಥ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
Update: 2025-11-07 19:16 IST
ಕಲಬುರಗಿ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿಯಲ್ಲಿ ಜರುಗಿರುವ 7ನೇ ಘಟಿಕೋತ್ಸವದ ಸಮಾರಂಭದಲ್ಲಿ ಇಲ್ಲಿನ ಕೆ.ಪಿ.ಇ. ಸೊಸೈಟಿಯ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ 9ನೇ ರ‍್ಯಾಂಕ್ (ಇಂಗ್ಲಿಷ್) ಹಾಗೂ ರೇಖಾ ಶಿವಯೋಗಿ 3ನೇ ರ‍್ಯಾಂಕ್ (ಕನ್ನಡ)ದಲ್ಲಿ ಪಡೆಯುವ ಮೂಲಕ ಕಾಲೇಜಿಗೆ ಹೆಮ್ಮೆ ತಂದಿದ್ದಾರೆ .
ಈ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಗಳನ್ನು ಹಾಗೂ ಪದವಿಯನ್ನು ಪ್ರದಾನ ಮಾಡಲಾಯಿತು. ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ರಾಧಕೃಷ್ಣ ದೊಡ್ಡಮನಿ, ಕಾರ್ಯದರ್ಶಿಗಳಾದ ಶಾಂತಪ್ಪ ಸೂರನ್, ಆಡಳಿತಾಧಿಕಾರಿಯಾದ ಚಂದ್ರಶೇಖರ್ ಶೀಲವಂತ, ಪ್ರಾಚಾರ್ಯರಾದ ಡಾ.ಎಸ್.ಚಂದ್ರಶೇಖರ್, ಸಂಸ್ಥೆಯ ಎಲ್ಲ ಆಡಳಿತ ಮಂಡಳಿಯವರು, ಉಪನ್ಯಾಸಕ ವರ್ಗದವರು ಹರ್ಷ ವ್ಯಕ್ತಪಡಿಸಿದರು.