×
Ad

ಕಲಬುರಗಿ | ಮೇ 23ರಂದು ನೇರ ಸಂದರ್ಶನ

Update: 2025-05-20 18:14 IST

ಕಲಬುರಗಿ : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮೇ 23ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಸ್ಟ್ರಡ್ಸ್ ಫಾರ್ಮಾ ಸೈನ್ಸ್ ಪ್ರೈ.ಲಿ. ದಲ್ಲಿ ಆಪರೇಟರ್ (ಲರ್ನ್ & ಅರ್ನ್) ಹುದ್ದೆಗೆ ಪಿಯುಸಿ/ಡಿಪ್ಲೋಮಾ ಬಿ.ಎ, ಬಿ.ಕಾಂ., ಬಿ.ಎಸ್.ಸಿ. (1 ಮತ್ತು 2 ವರ್ಷ) ಪಾಸಾಗಿರಬೇಕು. ವಯೋಮಿತಿ 18 ರಿಂದ 22 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೇಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್‍ನೊಂದಿಗೆ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು.

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News