ಕಲಬುರಗಿ | ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ ಪ್ರಕರಣ : ಕುಟುಂಬಕ್ಕೆ ಸಾಂತ್ವನ ಹೇಳಿದ ಡಾ.ಫಾರುಕ್ ಮಣ್ಣೂರ
ಕಲಬುರಗಿ : ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಾಳಲಾರದೆ ಸೈಯದ್ ಸಲೀಂ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆತನ ಕುಟುಂಬಕ್ಕೆ ಮಣ್ಣೂರ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಸಮಾಜ ಸೇವಕ ಡಾ.ಫಾರುಕ್ ಅಹ್ಮದ್ ಮಣ್ಣೂರ ಸಾಂತ್ವಾನ ಹೇಳಿ, ವೈಯಕ್ತಿಕವಾಗಿ ಹಣ ಸಹಾಯ ಮಾಡಿದರು .
ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಕನಕ ನಗರದಲ್ಲಿರುವ ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಮಾತನಾಡಿದ ಅವರು, ಮೃತ ವ್ಯಕ್ತಿಯ ಮಗನಿಗೆ ನಮ್ಮ ಆಸ್ಪತ್ರೆಯಲ್ಲಿ ಉದ್ಯೊಗ ನಿಡಲಾಗುವುದು. ಜೊತೆಗೆ ಉಳಿದ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಬ್ದುಲ್ ಬಾಷಿದ್, ಜಹೀರ ಪಟೇಲ್,ಜಗನ್ನಾಥ ಕಟ್ಟಿ ಅಬ್ದುಲ್ ಹಫಿಜ್, ನಸೀರ ಮದರಗಿ, ಸಂಜಿವ ಕುಮಾರ ಪಾಟೀಲ್, ನವಾಜ್ ಪಟೇಲ್, ಮೋಹಿನ್ ಮೋಮಿನ್, ಫಕ್ರೊದ್ದಿನ್ ಚಾಂಗಲೇರ, ಗುಲಾಮ್ ರಸೂಲ್, ತೈಯಬ್ ಮೋಮಿನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.