ಕಲಬುರಗಿ | ಏ.2 ರಿಂದ ಮಾನಸಿಕ ಆರೋಗ್ಯ ಶಿಬಿರ ಆಯೋಜನೆ
ಸಾಂದರ್ಭಿಕ ಚಿತ್ರ
ಕಲಬುರಗಿ : ಜಿಲ್ಲೆಯಲ್ಲಿ ಮಾನಸಿಕ ಆರೋಗ್ಯ ಶಿಬಿರ ಮನೋಚೈತನ್ಯ ಮನೋಚೈತನ್ಯ ಕಾರ್ಯಕ್ರಮದಡಿ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆ, ಎಲ್ಲಾ ಸಮೂದಾಯ ಆರೋಗ್ಯ ಕೇಂದ್ರ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 2025ರ ಏ.2 ರಿಂದ 29 ರವರೆಗೆ ಮಾನಸಿಕ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 2 ರಂದು ಆಳಂದ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 4 ರಂದು ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ, ಏಪ್ರಿಲ್ 5 ರಂದು ಕಲಬುರಗಿ ಕೇಂದ್ರ ಕಾರಾಗೃಹ, ಏಪ್ರಿಲ್ 8 ರಂದು ಚಿಂಚೋಳಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 11 ರಂದು ಅಫಜಲಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 15 ರಂದು ಚಿತ್ತಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 16 ರಂದು ದೇವಲ ಗಾಣಗಾಪುರ ಸಂಗಮ್, ಏಪ್ರಿಲ್ 17 ರಂದು ಜೇವರ್ಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 19 ರಂದು ಕಲಬುರಗಿ ಕೇಂದ್ರ ಕಾರಾಗೃಹ, ಏಪ್ರಿಲ್ 22 ಸೇಡಂ ತಾಲೂಕು ಸಾರ್ವಜನಿಕ ಆಸ್ಪತ್ರೆ, ಏಪ್ರಿಲ್ 25 ರಂದು ಕಾಳಗಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಏಪ್ರಿಲ್ 29 ರಂದು ಶಹಾಬಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶಿಬಿರ ನಡೆಯಲಿದೆ.
ಮಾನಸಿಕ ಕಾಯಿಲೆಗಳ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳನ್ನು ಸಮುದಾಯದಲ್ಲಿ ಗುರುತಿಸಿ ಅವರನ್ನು ಈ ಶಿಬಿರ ನಡೆಯುವ ದಿನಾಂಕದಂದು ಕರೆತಂದು ತಜ್ಞರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು ಅವರು ತಿಳಿಸಿದ್ದಾರೆ.