Kalaburagi | ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ಗೆ ಮಾದಿಗ ಸಮಾಜದಿಂದ ಸನ್ಮಾನ
Update: 2026-06-16 20:12 IST
ಕಲಬುರಗಿ: ಕರ್ನಾಟಕ ಸರ್ಕಾರದ ಸಂಪುಟ ದರ್ಜೆಯ ನೂತನ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ಮಾದಿಗ ಸಮಾಜದ ಜಿಲ್ಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶರಣರಲ್ಲಿ ಶ್ರೇಷ್ಠರಾದ ಶ್ರೀ ಮಾದಾರ ಚೆನ್ನಯ್ಯ ಅವರ ಭಾವಚಿತ್ರವನ್ನು ಸಚಿವರಿಗೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ವಿಭಾಗೀಯ ಅಧ್ಯಕ್ಷ ಚಂದ್ರಕಾಂತ ಕೆ.ನಾಟಿಕಾರ, ಜಿಲ್ಲಾ ಅಧ್ಯಕ್ಷ ಸಿದ್ದಲಿಂಗ ಸಿ.ಕಟ್ಟಿಮನಿ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಮಹಾದೇವ ಕವಾಳೆ, ಮಲ್ಲಿಕಾರ್ಜುನ ಚಟನಳಿ, ಕಾಂಗ್ರೆಸ್ ಪಕ್ಷದ ಯುವ ಮುಖಂಡ ಪರಶುರಾಮ ಕೆ. ನಾಟಿಕಾರ, ಕರ್ನಾಟಕ ರಾಜ್ಯ ದಲಿತ ಜನ ಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ರುಕ್ಕಪ್ಪಾ ಟಿ. ಕಾಂಬಳೆ, ಸೈಬಣ್ಣಾ ಚಂದನ, ಶ್ರೀ ಮಾದಾರ ಚೆನ್ನಯ್ಯ ಜನಜಾಗೃತಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕಾಳಗಿ, ಸುರೇಶ ಸೇಡಂ ಸೇರಿದಂತೆ ಮಾದಿಗ ಸಮಾಜದ ಅನೇಕ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.