×
Ad

ಕಲಬುರಗಿ |ಶಹಾಬಾದ್‌ ನಗರದ ಕಾಲೋನಿಗಳಿಗೆ ಶಾಸಕ ಮತ್ತಿಮಡು ಭೇಟಿ : ಸಮಸ್ಯೆಗಳ ಬಗ್ಗೆ ಪರಿಶೀಲನೆ

Update: 2025-08-08 23:10 IST

ಕಲಬುರಗಿ: ಶಹಾಬಾದ್‌ ನಗರದ ಜಿಇ ಕಾಲೋನಿ ಹಾಗೂ ಜೆಪಿ ಕಾಲೋನಿಗೆ ಶುಕ್ರವಾರ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಭೇಟಿ ನೀಡಿ ಸಮಸ್ಯೆಗಳ ಬಗ್ಗೆ  ಪರಿಶೀಲನೆ ನಡೆಸಿದರು. 

ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರು ತಮ್ಮ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಕಾಲೋನಿಯಲ್ಲಿನ ಕುಡಿಯಲು ನೀರಿನ ಸಮಸ್ಯೆ,  ಸೊಳ್ಳೆಗಳ ಕಾಟ,  ಕಾಡು ಹಂದಿ, ಮುಳ್ಳು ಹಂದಿ, ಹಾವುಗಳ ಕಾಟ ಹೆಚ್ಚಳ, ಹದಗೆಟ್ಟ ಒಳಚರಂಡಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳನ್ನು  ತಕ್ಷಣ ಬಂಧಿಸಬೇಕು ಎಂದು  ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ತಹಸೀಲ್ದಾರ್‌ ಜಗದೀಶ ಚೌರ್, ತಾಪಂ ಇಓ ಮಲ್ಲಿನಾಥ ರಾವೂರ, ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳಕರ್, ಮುಖಂಡರಾದ ಅಣವೀರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ್, ಶಿವಕುಮಾರ ಇಂಗಿನಶೆಟ್ಟಿ, ಚಂದ್ರಕಾಂತ ಗೊಬ್ಬೂರ್, ದಿನೇಶ ಗೌಳಿ, ಸಿದ್ರಾಮ ಕುಸಾಳೆ, ಮಹಾದೇವ ಗೊಬ್ಬೂರಕರ್, ದೇವದಾಸ ಜಾಧವ, ಬಸವರಾಜ ಬಿರಾದಾರ, ಗೋವಿಂದ ಕುಸಾಳೆ, ರೇವಣಸಿದ್ದ ಮತ್ತಿಮಡು, ಅನೀಲ ದೊಡ್ಡಮನಿ, ಶಾಂತಪ್ಪ ಬಸಪಟ್ಟಣ, ಶಿವಶರಣಪ್ಪ ಜೆಟ್ಟೂರ್, ರಾಜು ಮಾನೆ, ಶಂಕರ ಭಗಾಡೆ, ಲೇಖು ಚವ್ಹಾಣ, ಮಹೇಶ ಹೀರಾಳ, ವಿದ್ಯಾಸಾಗರ, ಅವಿನಾಶ ಸಾಳುಂಕೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News