ಕಲಬುರಗಿ | ಚುನಾವಣೆ ದಿನ ನಾಪತ್ತೆಯಾಗಿದ್ದ ಯುವಕನ ಕೊಲೆ: ಮೃತದೇಹ ಬಾವಿಯಲ್ಲಿ ಪತ್ತೆ
Update: 2024-05-10 15:14 IST
ಕಲಬುರಗಿ, ಮೇ 10: ಯುವಕನೋರ್ವನನ್ನು ಕೊಲೆಗೈದು ಬಾವಿಗೆಸೆದ ಘಟನೆ ಜಿಲ್ಲೆಯ ಅಫ್ಝಲ್ ಪುರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ನಡೆದಿದೆ.
ಜಾವೇದ್ (25) ಕೊಲೆಯಾದ ಯುವಕ. ಇವರನ್ನು ರಾಜಕೀಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ಚಾಲಕನಾಗಿ ಕೆಲಸ ಮಾಡುತ್ತಿದ್ದ ಜಾವೇದ್ ಚುನಾವಣೆಯ ದಿನ ರಾತ್ರಿ ನಾಪತ್ತೆಯಾಗಿದ್ದರು. ಇಂದು ಬೆಳಗ್ಗೆ ಅವರ ಮೃತದೇಹವು ಸಂಗಾಪುರ ಗ್ರಾಮದ ಬಾವಿಯಲ್ಲಿ ಪತ್ತೆಯಾಗಿದೆ.
ದೇವಲಗಾಣಗಾಪುರ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.