×
Ad

ಕಲಬುರಗಿ | ಎಸೆಸೆಲ್ಸಿ ಫಲಿತಾಂಶ ಕುರಿತಾದ ಅಪರ ಆಯುಕ್ತರ ಆದೇಶಕ್ಕೆ ನಮೋಶಿ ವಿರೋಧ

Update: 2025-02-22 19:17 IST

ಕಲಬುರಗಿ : ಅಪರ ಆಯುಕ್ತರು ಎಸೆಸೆಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಶಿಕ್ಷಕರು ಪೂರ್ವ ಸಿದ್ದತಾ ಪರೀಕ್ಷೆಗೋಸ್ಕರ ಹೆಚ್ಚುವರಿ ವಿಶೇಷ ತರಗತಿಗಳನ್ನು ನಡೆಸಲು ಹಾಗೂ ರಜಾ ದಿನಗಳಲ್ಲಿ ತರಗತಿಗಳನ್ನು ನಡೆಸಲು ಆದೇಶಿದ್ದುಸಿ ಒಪ್ಪುವಂತದಲ್ಲ. ಈ ಆದೇಶವು ಯುದ್ದ ಕಾಲದಲ್ಲಿ ಶಸ್ತ್ರಾದ ಅಭ್ಯಸ ಮಾಡಿದಂತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಟೀಕಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಎಸೆಸೆಲ್ಸಿ ಪರೀಕ್ಷಾ ದಿನಾಂಕ ಘೋಷಣೆಯಾಗಿ, ಎಲ್ಲ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಯೋಜನೆಯಂತೆ ಎಲ್ಲಾ ತಯಾರಿಗಳನ್ನು ನಡೆಸಲಾಗಿದೆ. ಮಕ್ಕಳ ಪರೀಕ್ಷಾ ತಯಾರಿಗೆ ಬೇಕಾಗುವ ತಯಾರಿಗಳನ್ನು ಈ ಮೊದಲೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಯೋಜಿಸಿದಂತೆ ಸಂಪೂರ್ಣ ತಯಾರಿ ಮಾಡಲಾಗಿದೆ. ಕಲಬುರಗಿ ಅಪರ ಅಯುಕ್ತರು ಫೆ.20ರ ಆದೇಶವು ಪ್ರತಿ ವರ್ಷದಂತೆ ವರ್ಷಪೂರ್ಣ ಯಾವುದೇ ತಯಾರಿ ನಡೆಸದೆ ಹೊಸ ಆದೇಶಗಳೊಂದಿಗೆ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದಿದ್ದಾರೆ.

ಶಿಕ್ಷಣ ಇಲಾಖೆಯ ಡಿ.ಎಸ್.ಇ.ಆರ್.ಟಿ ಮಕ್ಕಳ ಶೈಕ್ಷಣಿಕ ಅಗತ್ಯತೆಗೆ ತಕ್ಕಂತೆ ಶೈಕ್ಷಣಿಕ ಯೋಜನೆ ರೂಪಿಸಿರುತ್ತದೆ ಆದರೂ ಇಂತಹ ಆದೇಶಗಳು ಶಿಕ್ಷಕರ ಮೇಲೆ ಅತೀವ ಒತ್ತಡ ಹೇರುತ್ತಿರುವುದು ದುರಾದೃಷ್ಟಕರವಾಗಿದ್ದು, ಈಗಾಗಲೇ ಪರೀಕ್ಷಾ ತಯಾರಿಗಾಗಿ ಅನೇಕ ವಿಶೇಷ ತರಗತಿಗಳನ್ನು ನಡೆಸಿರುವ ಶಿಕ್ಷಕರು ತಮ್ಮ ಶಾಲೆಯ ಫಲಿತಾಂಶಗೋಸ್ಕರ ಶ್ರಮಪಡುತ್ತಿರುವುದರಿಂದ ಈ ಆದೇಶದ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News