×
Ad

ಕಲಬುರಗಿ | ನಜಿಮುದ್ದೀನ್‌ ಹತ್ಯೆ ಪ್ರಕರಣ : 8 ಮಂದಿ ಆರೋಪಿಗಳ ಬಂಧನ

Update: 2025-06-09 21:42 IST

ಬಂಧಿತ ಆರೋಪಿಗಳು

ಕಲಬುರಗಿ: ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯ ಫಿರೋಜಾಬಾದ್‌ ಕ್ರಾಸ್ ಸಮೀಪ ಕೊಲೆ ಆರೋಪಿ ನಜಿಮುದ್ದೀನ್‌ ಅಬ್ದುಲ್‌ ಸತ್ತಾ‌ರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕಲಬುರಗಿ ನಗರದ ನಿವಾಸಿಗಳಾದ ಗಜಾನನ, ಶೇಖ್ ಶಹಬಾಝ್‌, ನಿತಿನ್, ಸಚಿನ್, ಸಾಗರ್ ಚವ್ಹಾಣ್, ಸೈಯದ್ ಉಮ‌ರ್, ಮುಹಮ್ಮದ್ ಅಖಿಲ್ ಹಾಗೂ ವಿಜಯ ದೊಡ್ಡಮನಿ ಎಂದು ಗುರುತಿಸಲಾಗಿದೆ.

ರೌಡಿಶೀಟರ್ ಖಲೀಲ್ ಕೊಲೆ ಪ್ರಕರಣದಲ್ಲಿ ನಾಲ್ಕನೆಯ ಆರೋಪಿಯಾಗಿದ್ದ ನಜೀಮುದ್ದೀನ್ ಅನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ಖಲೀಲ್ ಸಹಚರರು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ನಜಿಮುದ್ದೀನ್ ಮತ್ತು ಇತರರು ಕಾರಿನಲ್ಲಿ ಬಿ.ಗುಡಿ ಸಮೀಪದ ದರ್ಗಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ಫಿರೋಜಾಬಾದ್ ಸಮೀಪ ಕೂಡಿ ದರ್ಗಾ ಸಮೀಪದಲ್ಲಿ ಕಾರು ಅಡ್ಡಗಟ್ಟಿದ ಆರೋಪಿಗಳು ಮಾರಕಾಸ್ತ್ರಗಳಿಂದ ನಜಿಮುದ್ದೀನ್ ನನ್ನು ಹೊಡೆದು ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿ, ಬೆನ್ನಟ್ಟಿದ ಪೊಲೀಸರು ಮೊದಲು 6 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಈಗ ಒಟ್ಟು 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನೂ ಬಾಕಿ ಉಳಿದ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಪೊಲೀಸ್ ಕಮಿಷನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆ ಹಾಗೂ ವಿಶ್ವವಿದ್ಯಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಜನ ಆರೋಪಿಗಳನ್ನು ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಬಂಧಿಸಿ, 6 ಮಂದಿ ಆರೋಪಿಗಳನ್ನು ಬೀದರ್ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಹಸ್ತಾಂತರಿಸಲಾಗಿದ್ದು, 5 ಮಂದಿ ಆರೋಪಿಗಳ ವಿರುದ್ಧ 3 ಪ್ರತ್ಯೇಕ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, 2 ಜನರ ವಿರುದ್ದ PAR ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News