ಕಲಬುರಗಿ| ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ; ಶಾಸಕ ಅಲ್ಲಂಪ್ರಭು ಪಾಟೀಲ್ ಭೇಟಿ
ಕಲಬುರಗಿ: ನಿರಂತರವಾಗಿ ಸುರಿದ ಮಳೆಗೆ ಬೆಳೆ ಹಾನಿ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ನಂದಿಕೂರ, ಪಾಣೆಗಾಂವ್, ಕಾಡನಾಳ್, ಸಿರನೂರ್ ಗ್ರಾಮಗಳಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ ಅವರು ತಹಶೀಲ್ದಾರ್ ಸೇರಿದಂತೆ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳೊಂದಿಗೆ ತಂಡವಾಗಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಪರಿಹಾರ ಕ್ರಮಕ್ಕೆ ಸೂಚಿಸಿದರು.
ನಿರಂತರವಾಗಿ ಸುರಿದ ಮಳೆಗೆ ಬೆಳೆ ಹಾನಿ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡ ಈ ಗ್ರಾಮಗಳಲ್ಲಿ 8 ವರ್ಷದ ನಂತರ ಈ ಪರಿಯಲ್ಲಿ ಮಳೆ ಸುರಿದಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ನಂದಿಕೂರದಲ್ಲಂತೂ ಊರಿನ ಪಕ್ಕದಲ್ಲಿರುವ ಹಳ್ಳ ತುಂಬಿ ಹರಿದು ಶಾಲೆಗಳಿಗೆ, 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ತೊಂದರೆಗೊಳಗಾದದ್ದನ್ನು ಖುದ್ದು ವೀಕ್ಷಿಸಿದರು.
ಈಗಾಗಲೇ ಸಿಎಂ ಸಿದ್ದರಾಮಯ್ಯನವರು ಮಳೆಯಿಂದ ಹಾನಿಗೊಳಗಾದ ಹೊಲಗದ್ದೆ ಫರತಾಬಾದ್ ಸುತ್ತಮುತ್ತ ಕಣ್ಣಾರೆ ವೀಕ್ಷಿಸಿದ್ದಾರೆ. ರೈತರ ನೋವಿಗೆ ಸ್ಪಂದಿಸುವ ಭರವಸೆ ನೀಡಿದ್ದಾರೆ. ಜಂಟಿ ಸಮೀಕ್ಷೆಗೆ ಆದೇಶ ಮಾಡಿದ್ದಾರೆ. ವರದಿ ಬಂದ ನಂತರ ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಸಿದ್ದರಾಮಯ್ಯ ಬಂದಾಗೆಲ್ಲಾ ರೈತರಿಗೆ ನೆರವು ನೀಡಿದ್ದಾರೆ. ಈಗಲೂ ನೀಡಲಿದ್ದಾರೆಂದರು.