×
Ad

ಕಲಬುರಗಿ | ʼಒಂದು ರಾಷ್ಟ್ರ, ಒಂದು ಚಂದಾದಾರಿಕೆʼ ನೀತಿ ಹೊಸತನಕ್ಕೆ ದಾರಿ: ಪ್ರೊ.ಆರ್.ಆರ್.ಬಿರಾದಾರ್

Update: 2025-07-10 19:55 IST

ಕಲಬುರಗಿ: “ಒಂದು ರಾಷ್ಟ್ರ, ಒಂದು ಚಂದಾದಾರಿಕೆ” ನೀತಿ ನಮ್ಮ ದೇಶದ ಸಂಶೋಧಕರಿಗೆ ಹೊಸ ದಾರಿಗಳನ್ನು ತೆರೆಯುತ್ತಿದೆ. ಇದರ ಮೂಲಕ 30 ಸಾವಿರಕ್ಕೂ ಹೆಚ್ಚು ಪ್ರಕಾಶಕರ ಕಾರ್ಯಗಳಿಗೆ ಮತ್ತು ಸುಮಾರು 1,30,000 ಉನ್ನತ ಮಟ್ಟದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಜರ್ನಲ್‌ಗಳಿಗೆ ಉಚಿತ ಪ್ರವೇಶ ಸಿಕ್ಕಿದೆ. ಇದು ಯುವ ಅಧ್ಯಾಪಕರಲ್ಲಿ ಗುಣಮಟ್ಟದ ಸಂಶೋಧನೆಗೆ ಪ್ರೇರಣೆ ನೀಡುವ ಮಹತ್ವದ ಹೆಜ್ಜೆ” ಎಂದು ಸಿಯುಕೆ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಹೇಳಿದರು.

ಆಳಂದ ತಾಲೂಕಿನ ಕಡಗಂಚಿಯ ಬಳಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ನಡೆದ “ಸಮಾಜ ವಿಜ್ಞಾನದಲ್ಲಿ ಯುವ ಅಧ್ಯಾಪಕ ಸದಸ್ಯರಿಗೆ ಸಂಶೋಧನಾ ವಿಧಾನ ಮತ್ತು ಗುಣಮಟ್ಟದ ಪ್ರಕಟಣೆ” ಕುರಿತ ಸಾಮರ್ಥ್ಯವರ್ಧನಾ ಕಾರ್ಯಕ್ರಮ (CBP) ಉದ್ಘಾಟಿಸಿ ಅವರು ಮಾತನಾಡಿದರು.

“ವೈಜ್ಞಾನಿಕ ಪ್ರಕಟಣೆಗಳ ಸಂಖ್ಯೆಯಲ್ಲಿ ಭಾರತ ಈಗಾಗಲೇ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಉಲ್ಲೇಖಗಳ ಸಂಖ್ಯೆಯಲ್ಲಿ ಮಾತ್ರ ಒಂಬತ್ತನೇ ಸ್ಥಾನದಲ್ಲಿದೆ. ಇದರಿಂದ ಸ್ಪಷ್ಟವಾಗುವಂತೆ, ನಾವು ಕೇವಲ ಸಂಶೋಧನೆ ಮಾಡುವಷ್ಟೇ ಅಲ್ಲದೆ ಅದರ ಗುಣಮಟ್ಟದತ್ತ ಹೆಚ್ಚು ಗಮನ ಹರಿಸಬೇಕು. ನಮ್ಮ ಪ್ರಕಟಣೆಗಳು ನೈತಿಕ, ನವೀನ ಮತ್ತು ಸಮಾಜಕ್ಕೆ ಸಂಬoಧ ಹೊಂದಿದ್ದಾಗ ಮಾತ್ರ ಅದಕ್ಕೆ ಜಾಗತಿಕ ಒಪ್ಪಿಗೆಯೂ ದೊರೆಯುತ್ತದೆ. ಎಂದರು.

ಶಿಕ್ಷಣ ಮತ್ತು ತರಬೇತಿ ಶಾಲೆಯ ಶಿಕ್ಷಣ ಇಲಾಖೆಯ ಕಾರ್ಯಕ್ರಮ ನಿರ್ದೇಶಕರಾದ ಐಸಿಎಸ್‌ಎಸ್‌ಆರ್-ಸಿಬಿಪಿಯ ಪ್ರೊ.ಈ.ಆರ್.ಅಂಗಡಿ ಅವರು ಮಾತನಾಡಿ, "ಸಂಶೋಧನೆಯ ಗುಣಮಟ್ಟವು ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಕಾರ್ಯಕ್ರಮವು ಸಂಶೋಧನೆ ಮತ್ತು ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಸಂಪರ್ಕಿಸುತ್ತದೆ" ಎಂದು ಹೇಳಿದರು.

ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ (ಸಿಎಂಡಿಆರ್), ನಿರ್ದೇಶಕ ಪ್ರೊ. ಬಸವಪ್ರಭು ಜಿರ್ಲಿ ಮಾತನಾಡಿದರುರು.

ಈ ಕಾರ್ಯಕ್ರಮವು ಜುಲೈ 7 ರಿಂದ ಜುಲೈ 18 ರವರೆಗೆ ನಿಗದಿಯಾಗಿದ್ದು, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನಾ ಸಾಮರ್ಥ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News