Kalaburagi | ಅಣವೀರಪ್ಪ ಬೋಳೆವಾಡಗೆ ಗುಲ್ಬರ್ಗಾ ವಿವಿಯಿಂದ ಪಿಎಚ್‌ಡಿ ಪದವಿ
ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಸಂಶೋಧನೆ ನಡೆಸಿದ ಅತಿಥಿ ಉಪನ್ಯಾಸಕ ಅಣವೀರಪ್ಪ ಬೋಳೆವಾಡ ಅವರಿಗೆ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಶಿವಕುಮಾರ ವಿ. ಉಪ್ಪೆ ಅವರ ಮಾರ್ಗದರ್ಶನದಲ್ಲಿ, “ಬ್ರಹ್ಮಕುಮಾರಿ ಸಂಸ್ಥೆಯ ಸ್ಥಾಪಕರಾದ ದಾದಾ ಲೇಖರಾಜ ಅವರ ಆಧ್ಯಾತ್ಮಿಕ ಜೀವನ ಮತ್ತು ಸಾಧನೆಗಳು: ಒಂದು ಐತಿಹಾಸಿಕ ಅಧ್ಯಯನ” ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಅವರು ಪಿಎಚ್‌ಡಿ ಪದವಿ ಪಡೆದಿದ್ದಾರೆ.
ಪ್ರಸ್ತುತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಅಣವೀರಪ್ಪ ಬೋಳೆವಾಡ ಅವರು ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಅಧ್ಯಯನ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದಾರೆ.
ಪಿಎಚ್‌ಡಿ ಪದವಿ ಲಭಿಸಿದ ಹಿನ್ನೆಲೆಯಲ್ಲಿ ಅಣವೀರಪ್ಪ ಬೋಳೆವಾಡ ಅವರಿಗೆ ಗಣ್ಯರು, ಸ್ನೇಹಿತರು ಹಾಗೂ ಬ್ರಹ್ಮಕುಮಾರಿ ಸಂಸ್ಥೆಯ ಮುಖ್ಯಸ್ಥರು ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.