ಕಲಬುರಗಿ: 16 ಕೆಜಿ ಮಾದಕ ವಸ್ತು ನಾಶಪಡಿಸಿದ ಪೊಲೀಸರು
Update: 2025-01-25 11:18 IST
ಕಲಬುರಗಿ: ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳಿಂದ ಜಪ್ತಿ ಮಾಡಲಾಗಿರುವ 3.48 ಲಕ್ಷ ರೂ. ಮೌಲ್ಯದ 16 ಕೆಜಿ ಮಾದಕ ವಸ್ತು ಬಬಲಾದ್ ಕ್ರಾಸ್ ಘಟಕದಲ್ಲಿ ನಾಶಪಡಿಸಲಾಗಿದೆ.
ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ 13 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ 3.48 ಲಕ್ಷ ರೂ. ಮೌಲ್ಯದ ಒಟ್ಟು 16 ಕೆಜಿ ಮಾದಕ ವಸ್ತುಗಳನ್ನು ಶುಕ್ರವಾರ ನಾಶ ಮಾಡಲಾಯಿತು.
ವಿಲೇವಾರಿ ಕಮಿಟಿಯ ಅಧ್ಯಕ್ಷ ಸದಸ್ಯರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಕ್ರಾಸ್ ನಲ್ಲಿರುವ ವಿಲೇವಾರಿ ಘಟಕದಲ್ಲಿ ಮಾದಕ ವಸ್ತುಗಳನ್ನು ನಾಶ ಪಡಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.