×
Ad

ಕಲಬುರಗಿ| ಟ್ರಾಫಿಕ್ ಸಿಗ್ನಲ್, ಸಿಬ್ಬಂದಿ ನಿಯೋಜಿಸುವಂತೆ ಅಭಿವೃದ್ಧಿ ಪರ ಸಮಿತಿಯಿಂದ ಮನವಿ

Update: 2026-01-09 23:43 IST

ಕಲಬುರಗಿ: ನಗರದ ಹಳೆ ಆರ್.ಟಿ.ಓ ಕ್ರಾಸ್ (ರಾಜಾಪುರ ಕ್ರಾಸ್ ಸೇಡಂ ರಸ್ತೆ) ಬಳಿ ತಕ್ಷಣವೇ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವುದು ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಕಲಬುರಗಿ ಅಭಿವೃದ್ಧಿ ಪರ ಸಮಿತಿ ವತಿಯಿಂದ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಅವರಿಗೆ ಮನವಿ ಸಲ್ಲಿಸಿ, ಒತ್ತಾಯಿಸಲಾಯಿತು.

ಕಳೆದ ವರ್ಷ ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಟ್ರಾಫಿಕ್ ಸಿಗ್ನಲ್‌ ಮತ್ತು ಪೊಲೀಸ್ ವ್ಯವಸ್ಥೆ ಇಲ್ಲದ ಕಾರಣ ಈ ಜಂಕ್ಷನ್‌ನಲ್ಲಿ ಪ್ರತಿದಿನ ಭಾರಿ ವಾಹನಗಳ ಸಂಚಾರದಿಂದ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತಗಳು ಹಾಗೂ ಅನಾಹುತಗಳು ನಿರಂತರವಾಗಿ ಸಂಭವಿಸುತ್ತಿವೆ. ಈ ಪ್ರದೇಶದಲ್ಲಿ ಶಾಲೆಗೆ ಹೋಗುವ ಮಕ್ಕಳ ಸಂಚಾರವೂ ಹೆಚ್ಚಿರುವುದರಿಂದ ಸಾರ್ವಜನಿಕರ ಹಾಗೂ ಮಕ್ಕಳ ಸುರಕ್ಷತೆ ಗಂಭೀರ ಅಪಾಯಕ್ಕೆ ಒಳಗಾಗಿದೆ ಎಂದು ಸಮಿತಿಯ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಲೂಯಿಸ್ ಕೋರಿ, ಮಲ್ಲಿಕಾರ್ಜುನ, ಸಾಗರ್, ಚಂದ್ರಶೇಖರ ಮಡಿವಾಳ, ಮುಬೀನ್ ಅಹ್ಮದ್, ಮಲ್ಲಿನಾಥ ಬಿರಾದಾರ, ಶಿವಲಿಂಗಯ್ಯ ಮಾಥಪಾಟಿ, ರಮೇಶ್ ಕಮಲಾಪುರ, ಮತ್ತಿತ್ತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News