×
Ad

ಅಫಜಲಪುರ | ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ; ಪೂರ್ವಭಾವಿ ಸಭೆ

Update: 2026-01-09 23:45 IST

ಅಫಜಲಪುರ : ಜ.21 ರಂದು ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತೋತ್ಸವ ಹಾಗೂ ಅಂಬಿಗರ ಚೌಡಯ್ಯನವರ ಭವನ ಉದ್ಘಾಟನೆ ಹಿನ್ನಲೆ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದ ದಿ.ವಿಠಲ ಹೇರೂರವರ ಶಕ್ತಿ ಕೇಂದ್ರದಲ್ಲಿ ದೇವಲ ಗಾಣಗಾಪೂರ ವಲಯದ ಕೋಲಿ ಕಬ್ಬಲಿಗ ಸಮಾಜದ ವತಿಯಿಂದ ಸಮಾಜ ಪೂರ್ವಭಾವಿ ಸಭೆ ಜರುಗಿತು.

ಸಭೆಯಲ್ಲಿ ಜ.21 ರಂದು ನಿಜಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಬಹು ಅದ್ದೂರಿಯಾಗಿ ಭಕ್ತಿ ಭಾವದಿಂದ ಸಡಗರ ಸಂಭ್ರಮದಿಂದ ಆಚರಣೆ ಮಾಡುವುದಾಗಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಸಮಾಜದ ಹಿರಿಯ ಮುಖಂಡರ ಸಮ್ಮುಖದಲ್ಲಿ ನೂತನ ಸಮಾಜದ ಹಂಗಾಮಿ ಪದಾಧಿಕಾರಿಗಳ ಆಯ್ಕೆ ಜರುಗಿತು. ದೇವಲ ಗಾಣಗಾಪೂರ ವಲಯದ ಕೋಲಿ ಸಮಾಜದ ನೂತನ ಹಂಗಾಮಿ ಅಧ್ಯಕ್ಷರಾಗಿ ಯಲ್ಲಪ್ಪ ರಮಗಾ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಓಂಕಾರ ಹೇರೂರ ಅವರನ್ನು ಆಯ್ಕೆ ಮಾಡಿ ಶುಭ ಕೋರಲಾಯಿತು.

ಈ ಸಂದರ್ಭದಲ್ಲಿ ಸಭೆಯಲ್ಲಿ ಈರಣ್ಣ ಡಾಂಗೆ, ಬಲವಂತ ಜಕಬಾ,ಈರಣ್ಣ ಹಾಗರಗುಂಡಗಿ,ಗುರು ಹೇರೂರ, ಸಿದ್ದು ಡಾಂಗೆ, ಶ್ರೀಪಾದ ಮಾಳಗೆ, ರಾಮು ಹೇರೂರ,ಚಂದಪ್ಪ ದೇವರಮನಿ,ರಾಕೇಶ ವಡಗೇರಿ,ಯಲ್ಲಪ್ಪ ರಮಗಾ ಯಲ್ಲಪ್ಪ ಮುದಕಣ್ಣ, ಮಲ್ಲು ನಿಂಬರ್ಗಿ,ದಿಗಂಬರ ಕಾಡಹುಲಿ,ಶಾಂತಪ್ಪ ಮುದಕಣ್ಣ,ಮಲ್ಲು ನಿಂಬರ್ಗಿ, ರಾಘು ಘತ್ತರಗಿ ಸೇರಿದಂತೆ ಅನೇಕರಿದ್ದರು.

.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News