ಕಲಬುರಗಿ | ಕರ್ನಾಟಕ ಮಾಧ್ಯಮ ಅಕಾಡಮಿಯ ವಾರ್ಷಿಕ ಪ್ರಶಸ್ತಿಗೆ ಮೊಹಿಯುದ್ದೀನ್ ಪಾಷಾ ಆಯ್ಕೆ
Update: 2026-01-09 20:41 IST
ಕಲಬುರಗಿ: ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಕಲಬುರಗಿಯ ಇಂಕ್ವಿಲಾವ್ ಎ ದಕ್ಕನ್ ಉರ್ದು ಪತ್ರಿಕೆಯ ಸಂಪಾದಕ ಮತ್ತು ಹಿರಿಯ ಪತ್ರಕರ್ತರಾದ ಮೊಹಿಯುದ್ದೀನ್ ಪಾಷಾ ಅವರು ಆಯ್ಕೆಯಾಗಿದ್ದಾರೆ.
ಒಟ್ಟು 30 ಹಿರಿಯ ಪತ್ರಕರ್ತರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ವಿವಿಧ ದತ್ತಿ ಪ್ರಶಸ್ತಿಗೆ 10 ಪತ್ರಕರ್ತರಿಗೆ ಆಯ್ಕೆ ಮಾಡಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಮತ್ತು ಕಾರ್ಯದರ್ಶಿ ಸಹನಾ ಎಂ ಅವರು ಆದೇಶ ಹೊರಡಿಸಿದ್ದಾರೆ.
50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.