×
Ad

ಕಲಬುರಗಿ | ಆಸ್ತಿ ವಿಚಾರ : ಅಳಿಯಂದಿರಿಂದ ಅತ್ತೆಯ ಹತ್ಯೆ

Update: 2025-05-05 18:48 IST

ಕಲಬುರಗಿ : ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಾರಕಾಸ್ತ್ರಗಳಿಂದ ಸ್ವತಃ ಅಳಿಯಂದಿರೇ ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲ್ಲೂಕಿನ ಬಂದರವಾಡ್ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಮೃತರನ್ನು ಬಂದರವಾಡ್ ಗ್ರಾಮದ ನಿವಾಸಿ ಲಕ್ಕಮ್ಮ (40) ಎಂದು ಗುರುತಿಸಲಾಗಿದೆ.

ಮನೆ ಕಟ್ಟುವ ವಿಚಾರದಲ್ಲಿ ಈ ಹಿಂದೆ ಕುಟುಂಬದಲ್ಲೇ ಜಗಳವಾಗಿತ್ತು. ಅದೇ ಹಳೆಯ ವೈಶಮ್ಯದಿಂದಾಗಿ ಈಗ ಮಹಿಳೆಯ ಹತ್ಯೆ ನಡೆದಿದೆ ಎಂದು ತಿಳಿದುಬಂದಿದೆ.

ಸದ್ಯ ಕೊಲೆ ಆರೋಪಿಗಳಾದ ಸಂತೋಷ್(35) ಮಂಜುನಾಥ್(25) ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತಾಗಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಫಜಲಪುರ ವೃತ್ತ ನಿರೀಕ್ಷಕ ಚನ್ನಯ್ಯ ಅವರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಸೇರಿದಂತೆ ಮತ್ತಿತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News