×
Ad

ಕಲಬುರಗಿ | ಆಸ್ತಿ ವಿಚಾರಕ್ಕೆ ಗಲಾಟೆ : ಪೆಟ್ರೋಲ್ ಸ್ಪ್ರೇ ಮಾಡಿ ಸಾಮೂಹಿಕ ಹತ್ಯೆಗೆ ಯತ್ನ

Update: 2024-11-28 14:38 IST

ಕಲಬುರಗಿ : ಆಸ್ತಿ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದುಷ್ಕರ್ಮಿಯೊಬ್ಬ ಮನೆಯೊಂದಕ್ಕೆ ಕ್ರಿಮಿನಾಶಕ ಸಿಂಪಡಿಸುವ ಕ್ಯಾನ್‌ನಲ್ಲಿ ಪೆಟ್ರೋಲ್ ಸ್ಪ್ರೇ ಮಾಡಿ ಬೆಂಕಿ ಹಚ್ಚಿ ಸಾಮೂಹಿಕ ಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ ತಾಲ್ಲೂಕಿನ ಕಡಣಿ ಗ್ರಾಮದಲ್ಲಿ ನಡೆದಿದೆ.

ಕಡಣಿ ಗ್ರಾಮದ ಗುಂಡೇರಾವ್ ಎಂಬವರ ಮನಗೆ ಶಿವಲಿಂಗಪ್ಪ ಎಂಬವನು ಪೆಟ್ರೋಲ್ ಸುರಿದಿರುವ ವ್ಯಕ್ತಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಶಿವಲಿಂಗಪ್ಪ 5 ವರ್ಷದ ಹಿಂದಷ್ಟೇ ಗುಂಡೇರಾವ್ ಅವರಿಗೆ 4 ಎಕರೆ ಜಮೀನು ಮಾರಾಟ ಮಾಡಿದ್ದರು. ಅದಕ್ಕೆ 13 ಲಕ್ಷ ಅಡ್ವಾನ್ಸ್ ಕೊಟ್ಟಿದ್ದರು. ಇದೀಗ ರಿಜಿಸ್ಟರ್ ಮಾಡುವ ವೇಳೆಯಲ್ಲಿ ಗಲಾಟೆಯಾಗಿದೆ ಎನ್ನಲಾಗಿದೆ.

ಇದೇ ಸಿಟ್ಟಿನಲ್ಲಿ ಶಿವಲಿಂಗಪ್ಪ, ಗುಂಡೇರಾವ್ ಮನೆಗೆ ಪೆಟ್ರೋಲ್ ಸ್ಪ್ರೇ ಮಾಡಿ, ಮನೆ ಸುಟ್ಟು ಹಾಕಿದ್ದಾನೆ. ಅದೃಷ್ಟವಶಾತ್ ಗುಂಡೇರಾವ್ ಅವರ ಮನೆಯಲ್ಲಿದ್ದ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮನೆ ಸುಟ್ಟು ಕರಕಲಾಗಿದ್ದು, ಬೆಂಕಿ ಆವರಿಸಿದ್ದರಿಂದ ಮನೆಯಲ್ಲಿದ್ದ 7 ಜನರು ಅಸ್ವಸ್ಥರಾಗಿದ್ದಾರೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಫರಹತಾಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News