×
Ad

ಕಲಬುರಗಿ | ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಪಂಚಾಯತ್‌ಗೆ ಬೀಗ ಹಾಕಿ ಪ್ರತಿಭಟನೆ

Update: 2025-08-26 21:17 IST

ಕಲಬುರಗಿ: ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ, ಅಫಜಲಪುರ ತಾಲೂಕಿನ ಬಿದನೂರ ಪಂಚಾಯತ್‌ಗೆ ಬೀಗ ಜಡಿದು ಅಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

ಗ್ರಾಮದಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಕಲ್ಪಿಸದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ, ಸಾರ್ವಜನಿಕರು ಆಕ್ರೋಶ ಹೊರಹಾಕಿದರು. ‌

ಸೂಕ್ತ ರಸ್ತೆ, ಚರಂಡಿ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಬಿದನೂರ ಪಂಚಾಯತ್‌ ವ್ಯಾಪ್ತಿಗೆ ಬರುವ ಬಿದನೂರು, ಹಾವನೂರ, ಗೊಬ್ಬೂರ.ಕೆ, ಔರಳ್ಳಿ ನಾಲ್ಕು ಗ್ರಾಮದ ಜನತೆ ಪರಿತಪ್ಪಿಸುತ್ತಿದ್ದರೂ ಸಹ, ಪಂಚಾಯತ್‌ ಪಿಡಿಓ, ಅಧ್ಯಕ್ಷ ನಿರ್ಲಕ್ಷ್ಯ ತೊರುತ್ತಿದ್ದಾರೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಇನ್ನು ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಯಲ್ಲೂ ಭಾರಿ ಅವ್ಯವಹಾರ ನಡೆದಿದ್ದು, 2020ರಿಂದ ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗLu ನಿರಂತರ ಲೂಟಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಈ ಕುರಿತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೈಲಾರಿ ದೊಡ್ಡಮನಿ, ಸಿದ್ದು ಚಿಕ್ಕೌಲಗಿ, ಮಹಾಂತಪ್ಪ ಚಿಕ್ಕೌಲಗಿ, ಯಲ್ಲಾಲಿಂಗ ಕರಿಕಲ, ಅಮರ ಚಿಕ್ಕೌಲಗಿ, ಯಲ್ಲಾಲಿಂಗ ಡೋಂಗ್ರಿ, ಸಚಿನ್ ಗುತ್ತೇದಾರ್, ಸಿದ್ದು ಪೂಜಾರಿ, ಮಡಿವಾಳಪ್ಪ ಗಿರಣಿ, ಶರಣು ಕರಿಕಲ್, ರುದ್ರಲಿಂಗ ಗುತ್ತೇದಾರ್, ಸಿದ್ಧರಾಮ ಚಿಕ್ಕೌಲಗಿ, ಶಿವಾನಂದ ಹೇರೂರು, ಮಡಿವಾಳಪ್ಪ ಮಲ್ಲಿಬಾದಿ, ಉಲ್ಲಾಸ ಕುಮಾರ್ ಹೂಗಾರ್ ಸೇರಿದಂತೆ ಮತ್ತಿತರರು ಇದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News