×
Ad

ಕಲಬುರಗಿ | ಉತ್ತಮ ಆರೋಗ್ಯಕ್ಕೆ ನಿಯಮಿತ ಆಹಾರ, ನಿದ್ದೆ ಅವಶ್ಯಕ : ಡಾ.ರಾಜಶೇಖರ ಮಾಲಿ

Update: 2025-02-13 20:01 IST

ಕಲಬುರಗಿ : ಆರೋಗ್ಯದಲ್ಲಿ ಹೆಚ್ಚಿನ ತೂಕವಿದ್ದು, ನರಗಳ ದೌರ್ಬಲ್ಯವಿದ್ದರೆ, ವಾಕಿಂಗ್ ಮಾಡಲು ಆಗದೆ ಇರುವಂತವರಿಗೆ ಫೂಟ್ ಪಲ್ಸ್ ಥೆರೆಫಿಯಿಂದ ಔಷಧ ರಹಿತ ಚಿಕಿತ್ಸೆ ಪಡೆಯಬಹುದೆಂದು ಕಲಬುರಗಿ ಟ್ರಾಮಾ ಕೇರ್ ಸೆಂಟರ್ ಜಿಮ್ಸ್ ಆಸ್ಪತ್ರೆಯ ಪ್ರಭಾರಿ ಹಿರಿಯ ತಜ್ಞರಾದ ಡಾ.ರಾಜಶೇಖರ ಮಾಲಿ ತಿಳಿಸಿದರು.

ನಗರದ ವಿದ್ಯಾನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿದ್ಯಾನಗರ ವೆಲ್ಫೇರ್ ಸೊಸೈಟಿ ಹಾಗೂ ಕಂಪಾನಿಯೋ ಸಹಯೋಗದಲ್ಲಿ 15 ದಿನಗಳಿಂದ ನಡೆದ ಈ ಶಿಬಿರದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಕೆಲಸದ ಒತ್ತಡದಲ್ಲಿ ಸಮಯಕ್ಕನುಗುಣವಾಗಿ ಆಹಾರ ಸೇವಿಸದೇ ಶ್ರಮಕ್ಕೆ ತಕ್ಕಂತೆ ನಿದ್ರಿಸದೇ ಇರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದೇವೆ ಎಂದರು.

ವಿದ್ಯಾನಗರ ವೆಲ್ಫೇರ್ ಸೊಸೈಟಿಯ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಸಾಮಾಜಿಕ ಸೇವೆಯಲ್ಲಿ ಒಟ್ಟು 1135 ಜನ ಔಷಧಿ ಇಲ್ಲದೆ ಚಿಕಿತ್ಸೆ ಪಡೆದುಕೊಂಡರು ಎಂದು ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ತಿಳಿಸಿದರು.

ಡಾ.ಸಂಗಮೇಶ ಹತ್ತಿ, ಬಸವರಾಜ ಎನ್.ಪುಣ್ಯಶೆಟ್ಟಿ, ಅಧ್ಯಕ್ಷತೆ ಮಲ್ಲಿನಾಥ ದೇಶಮುಖ ಮಾತನಾಡಿದರು.

ರೇಖಾ ಅಂಡಗಿ ಪ್ರಾರ್ಥಿಸಿದರು. ಕೌಶಿಕ ಚಂದನ ಸ್ವಾಗತಿಸಿದರು. ನಾಗೇಂದ್ರ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ರಾಜಶೇಖರ ಮಾಲಿ, ಡಾ.ಸಂತೋಷ ಪಾಟೀಲ, ಡಾ.ಶರಣಕುಮಾರ ಜಾಬಶೆಟ್ಟಿ, ಡಾ.ಅಮೃತಾ ನಿಗ್ಗುಡಗಿ, ಡಾ.ಅನುರಿತಾ ಹಿಂದೊಡ್ಡಿ, ಡಾ.ಸುಜಯ್ ಜಾಜಿ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಹಣಮಂತ, ಭೀಮಾಶಂಕರ ಹಾಗೂ ವಿದ್ಯಾನಗರ ವೆಲ್ಫೇರ್ ಸೊಸೈಟಿಯ, ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ನ ಹಾಗೂ ಮಲ್ಲಿಕಾರ್ಜುನ ತರುಣ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News