×
Ad

ಕಲಬುರಗಿ | ಬಸವಣ್ಣರ ನಾಮಫಲಕ ತೆರವು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅನಿರ್ಧಿಷ್ಟಾವಧಿ ಧರಣಿ

Update: 2025-06-24 16:38 IST

ಕಲಬುರಗಿ: ಅನಧಿಕೃತವಾಗಿ ಹಾಕಲಾಗಿದ್ದ ಬಸವಣ್ಣನವರ ನಾಮಫಲಕವನ್ನು ಚಿಂಚೋಳಿ ತಾಲೂಕು ಆಡಳಿತ ತೆರವುಗೊಳಿಸಿದೆ. ಇದನ್ನು ಖಂಡಿಸಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಯಿತ್ತಿದೆ.

ನಾಮಫಲಕ ತೆರವುಗೊಳಿಸಿದಕ್ಕಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಎಲ್ಲಾ ಬಸವಪರ ಸಂಘಟನೆಗಳ ಒಕ್ಕೂಟದಿಂದ ಬಸವ ಭವನ ನಿರ್ಮಾಣಕ್ಕಾಗಿ ನಿವೇಶನ ಮಂಜೂರಾತಿ ಆಗ್ರಹಿಸಿ ಅನಿರ್ಧಿಷ್ಟಾ ಧರಣಿ ನಡೆಸುತ್ತಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಲಿಂಗಾಯತ ಸಮಾಜದ ಬಹುದಿನದ ಬೇಡಿಕೆಯಾದ ಬಸವ ಭವನ ನಿರ್ಮಾಣಕ್ಕೆ ಲಿಂಗಾಯತ ಸಮಾಜದ ಮುಖಂಡರು ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಸೇಡಂ ಹಾಗೂ ತಹಶೀಲ್ದಾರ್ ಚಿಂಚೋಳಿ ಅವರಿಗೆ ಲಿಖಿತ ಮನವಿ ನೀಡಿದ್ದಾರೆ. ಕಂದಾಯ ಇಲಾಖೆಯ ವ್ಯಾಪ್ತಿಯ ಬಸವ ಭವನ ಸ್ಥಾಪನೆಗೆ ಕೊಡಲು ಯಾವುದೇ ಕಾನೂನಾತ್ಮಕ ತೊಡಕು ಇಲ್ಲದ ಜಿಲ್ಲಾಧಿಕಾರಿಗಳು ಮಂಜೂರು ಮಾಡಬಹುದಾದ ಚಂದಾಪುರದ ಸರ್ವೆ ನಂಬರ್ 12/4 ರಲ್ಲಿ 200×200 ಫೀಟ್ ಅಳತೆಯ ಸ್ಥಳವನ್ನು ಕೊಡಲು ಮನವಿ ನೀಡಲಾಗಿದೆ. ಹಾಗಾಗಿ ಇದೇ ಸ್ಥಳದಲ್ಲಿ ಭವನ ನಿರ್ಮಿಸಬೇಕೆಂದು ಆಗ್ರಹಿಸಿದರು.

ಈ ವೇಳೆಯಲ್ಲಿ ನೀಲಕಂಠ ಸೀಳಿನ, ನಂದಿಕುಮಾರ ಪಾಟೀಲ, ಸಂಜೀವಕುಮಾರ ಪಾಟೀಲ, ಸುರೇಶ ದೇಶಪಾಂಡೆ, ರಾಜಶೇಖರ ಹಿತ್ತಲ, ಆನಂದ ಹಿತ್ತಲ, ಶಂಕರ ಶಿವಪೂರಿ, ಮಲ್ಲಿಕಾರ್ಜುನ ಬುಶೆಟ್ಟಿ ಸೇರಿದಂತೆ ಅನೇಕರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News