×
Ad

ಕಲಬುರಗಿ | ಮೇ 29 ರಂದು ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದಿಂದ ಎಸೆಸೆಲ್ಸಿ,‌ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ

Update: 2025-05-14 20:12 IST

ಕಲಬುರಗಿ : ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ಅಲ್ಪಸಂಖ್ಯಾತರ ನೌಕರರ ಸಂಘದ ವತಿಯಿಂದ ಮೇ 29 ರಂದು 2024-25ನೇ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಸೈಯ್ಯದ ನಜೀರೊದ್ದಿನ ಮುತವಲ್ಲಿ ತಿಳಿಸಿದ್ದಾರೆ.

ಅಂದು 6 ಗಂಟೆಗೆ ನಗರದ ಕನ್ನಡ ಭವನದಲ್ಲಿನ ಸಭಾ ಭವನದಲ್ಲಿ ಅಯೋಜಿಸಲಾಗಿದ್ದು, ಸಿ.ಎ.ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸು ಮಾಡಿದ ವಿದ್ಯಾರ್ಥಿಗಳಿಗೆ ಹಾಗೂ ಯುಪಿಎಸ್ಸಿಯಲ್ಲಿ ಉತ್ತೀರ್ಣರಾದ ಕಮಲಾಪೂರ ತಾಲ್ಲೂಕಿನ ಮೋಹನ ಪಾಟೀಲ್ ಕೂಡ ಸನ್ಮಾನಿಸಲಾಗುವುದು ಎಂದಿದ್ದಾರೆ.

ಜಿಲ್ಲೆಯಲ್ಲಿ ಉರ್ದು ಭಾಷೆಯ ಉನ್ನತಿಗಾಗಿ, ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರ್ಕಾರಿ ಉರ್ದು ಪ್ರೌಢ ಶಾಲೆಗಳಿಂದ ಶೇ.80 ಅಂಕ ಪಡೆದು ಉತ್ತೀರ್ಣರಾಗಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು ಸರಕಾರಿ ಅಲ್ಪಸಂಖ್ಯಾತರ ನೌಕರರ ಮಕ್ಕಳು "ಹಿಫ್ಟ್" (ಖುರ್ ಆನ್ ಫಠಣ ಬಾಯಿಪಾಟ) ಮುಗಿಸಿರುವ ವಿದ್ಯಾರ್ಥಿಗಳಿಗೂ ಪ್ರೋತ್ಸಾಹಿಸಲಾಗುವುದೆಂದು ತಿಳಿಸಿದ್ದಾರೆ.

ಜಿಲ್ಲೆಯ ಅಲ್ಪಸಂಖ್ಯಾತ ಸರಕಾರಿ ನೌಕರರ ಮಕ್ಕಳು ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚಿನ ಅಂಕ ಪಡೆದು ಪಾಸಾದವರು ತಮ್ಮ ಅಂಕ ಪಟ್ಟಿ, ಆಧಾರ್‌ ಕಾರ್ಡ್‌, ಪಾಸ್ಪೋರ್ಟ್ ಅಳತೆಯ ಫೋಟೋ ಹಾಗೂ ಪಾಲಕರು ಸರ್ಕಾರಿ ನೌಕರರ ಇದ್ದ ಬಗ್ಗೆ ಮಾಹಿತಿ ಪತ್ರ ಇವುಗಳನ್ನು ಮೇ 25ರಂದು ಸಾಯಂಕಾಲ 5:00 ಗಂಟೆಯ ಒಳಗಾಗಿ ವಾಟ್ಸ್ ಅಪ್ ಮುಖಾಂತರ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬಹುದು.

ಸಂಘದ ಅಧ್ಯಕ್ಷ ಸೈಯ್ಯದ ನಜೀರೊದ್ದಿನ ಮುತವಲ್ಲಿ ಮೋ.ನಂ 9845478234, ಕಾರ್ಯದರ್ಶಿ ನವಾಬ ಖಾನ್ ಮೋ.ನಂ 9449933661 ಇವರನ್ನು ಸಂಪರ್ಕಿಸಬೇಕು ಎಂದು ಮುತವಲ್ಲಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News